ಹಿಂದುಳಿದ ವರ್ಗಗಳ ರಾಜಕೀಯ ಸಬಲೀಕರಣವೇ KRPP ಗುರಿ : ಭೀಮಾಶಂಕರ ಪಾಟೀಲ್

ಗಂಗಾವತಿ : ರಾಜ್ಯದ ಹಿಂದುಳಿದ ವರ್ಗಗಳ ಸಮುದಾಯವನ್ನು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇನ್ನಿತರ ರಾಜಕೀಯ ಪಕ್ಷಗಳು ತಮ್ಮ ಅವಕಾಶಕ್ಕೆ ತಕ್ಕಂತೆ ಬಳಸಿಕೊಂಡು ಬಿಸಾಡಿವೆ.ಈ ಸಮುದಾಯಗಳ ರಾಜಕೀಯ ಸಬಲಿಕರಣವೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯವಾದ ಗುರಿಯಾಗಿದೆ.ಈ ಉದ್ದೇಶಕ್ಕಾಗಿಯೇ ಪಕ್ಷದಲ್ಲಿ ಹಿಂದುಳಿದ ವರ್ಗಗಳ ಘಟಕ ಪ್ರಾರಂಭಿಸಲಾಗಿದೆ ಎಂದು KRPP ರಾಜ್ಯ ಯುವ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.

promotions

ಗಂಗಾವತಿ ನಗರದಲ್ಲಿ ಪಕ್ಷದ ವತಿ ಇಂದ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಗಳ ಘಟಕದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಪಕ್ಷದ ಜನಪ್ರಿಯ ಜನ ನಾಯಕರಾದ ಶಾಸಕ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರ ಹಿಂದುಳಿದ ವರ್ಗಗಳ ಸಬಲೀಕರಣದ ಕನಸು ನಾವು ಪಕ್ಷ ಸಂಘಟಿಸುವುದರ ಮೂಲಕ ನನಸು ಮಾಡಬೇಕಿದೆ.

promotions

ಪಕ್ಷದ ಪದಾಧಿಕಾರಿಗಳು ರಾಜ್ಯದ ರಾಜಕೀಯ ಇತಿಹಾಸಕ್ಕೆ ಹಿಂದುಳಿದ ಸಮುದಾಯಗಳು ನೀಡಿರುವ ಕೊಡುಗೆಗಳನ್ನು ತಿಳಿದುಕೊಳ್ಳಬೇಕು.ಹಿಂದುಳಿದ ಸಮುದಾಯ ಯಾರನ್ನು ಬೆಂಬಲಿಸಿದೆಯೋ ಅವರೇ ಈ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.ಆದರೂ ಈ ವರ್ಗಗಳನ್ನು ರಾಜಕೀಯವಾಗಿ ಬೆಳೆಸುವ ಕೆಲಸ ಯಾರು ಮಾಡಿಲ್ಲ ಎಂದರು.

ಮುಂಬರುವ ಜಿಲ್ಲಾ ಪಂಚಾಯತ, ತಾಲ್ಲೂಕು ಪಂಚಾಯತ ಸೇರಿದಂತೆ ಎಲ್ಲಾ ರೀತಿಯ ಚುನಾವಣೆಗಳಲ್ಲಿ ನಮ್ಮ ಪಕ್ಷ ಹಿಂದುಳಿದ ಸಮುದಾಯದ ಯುವಕರಿಗೆ ಪ್ರಥಮ ಪ್ರಾಶಸ್ತ್ಯ ನೀಡಲಿದೆ ಎಂದು ಜಿಲ್ಲಾಧ್ಯಕ್ಷರಾದ ಮನೋಹರ ಗೌಡ ತಿಳಿಸಿದರು.

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 48 ಸಾವಿರ ಹಿಂದುಳಿದ ವರ್ಗಗಳ ಮತಗಳಿವೆ.ಅವರೆಲ್ಲರೂ ನಮ್ಮ ಪಕ್ಷವನ್ನು ಬೆಂಬಲಿಸಿದ್ದಾರೆ.ಅವರಿಗೆ ರಾಜಕೀಯ ಅವಕಾಶ ನೀಡಿ ಅವರ ಋಣ ತೀರಿಸುವ ಕೆಲಸ ಪಕ್ಷ ಮಾಡಲಿದೆ ಎಂದು ಮನೋಹರ ಗೌಡ ತಿಳಿಸಿದರು.

ಜಿಲ್ಲಾಧ್ಯಕ್ಷರಾದ ಮನೋಹರ ಗೌಡ, ಓಬಿಸಿ‌ ಘಟಕದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಸಾ ದಲಭಂಜನ, ನಗರ ಅಧ್ಯಕ್ಷ ವಿರೇಶ ಬಲಕುಂದಿ, ಯುವ ಘಟಕದ ಪ್ರಧಾನಕಾರ್ಯದರ್ಶಿ ರಾಜೇಶ ರೆಡ್ಡಿ, ಯುವ ಮುಖಂಡ ಮಹಾಂತೇಶ ಸಂಗಟಿ, ಓಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಈಡಿಗೇರ, ನಗರ ಅಧ್ಯಕ್ಷ ಪ್ರಸಾದ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More Articles