ಹಿಂದೂ ಧರ್ಮ ಜಾಗೃತಿ, ಮತ್ತು ಪಾಲನೆ ಅತೀ ಅವಶ್ಯಕ ಪ್ರಭುನೀಲಕಂಠ ಸ್ವಾಮೀಜಿ
- Shivaraj Bandigi
- 14 Jan 2024 , 9:35 PM
- Belagavi
- 281
ಬೈಲಹೊಂಗಲ: ‘ಪುರಾತನ ಇತಿಹಾಸ ಹೊಂದಿರುವ ಹಿಂದೂ ಧರ್ಮದ ಜಾಗೃತಿ, ಸಂಸ್ಕೃತಿಯ ಪಾಲನೆ ಅತ್ಯಅವಶ್ಯಕವಾಗಿದೆ’ ಎಂದು ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

ಅವರು ರವಿವಾರ ಪಟ್ಟಣದ ಜವಳಿಕೂಟದಲ್ಲಿರುವ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳ ತಾಲೂಕಾ ಘಟಕದ ವತಿಯಿಂದ ನವರಾತ್ರಿ ದಸರಾ ಮಹೋತ್ಸವ ಅಂಗವಾಗಿ ಭಾನುವಾರ ಆರಂಭವಾದ ಶ್ರೀದುರ್ಗಾ ಮಾತಾ ದೌಡ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತೀಯ ಪರಂಪರೆಯಲ್ಲಿ ಹಲವಾರು ಧರ್ಮಗಳಿವೆ, ಆಚರಣೆಗಳಿವೆ. ಅವುಗಳೆಲ್ಲುವುದಕ್ಕಿಂತ ಹೆಚ್ಚು ಸನಾತನ ಹಿಂದೂ ಧರ್ಮದ ಪರಂಪರೆ, ಆಚರಣೆಗೆ ಹೆಚ್ಚಿನ ಪ್ರಾಶಸ್ತ್ಯ, ಪ್ರಾಮುಖ್ಯತೆ ನೀಡಲಾಗಿದೆ. ಅಂತಹ ಪುಣ್ಯ, ಪವಿತ್ರವಾಗಿರುವ ಹಿಂದೂ ಧರ್ಮದ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿಕೊಟ್ಟು ಸುಸಂಸ್ಕೃತರನ್ನಾಗಿಸಬೇಕು. ನವರಾತ್ರಿ ದಸರಾ ಮಹೋತ್ಸವದ ಒಬ್ಬತ್ತು ದಿನಗಳ ಪವಿತ್ರ ಕ್ಷಣದಲ್ಲಿ ನವದುರ್ಗೆಯರ ಆರಾಧನೆ ಮಾಡಬೇಕು. ಪ್ರತಿಯೊಬ್ಬರು ಶ್ರದ್ಧೆ, ಭಕ್ತಿಯಿಂದ ದುರ್ಗಾ ದೌಡ್‌ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದರು.
ಶಾಸಕ ಮಹಾಂತೇಶ ಕೌಜಲಗಿ, ನಟ ಶಿವರಂಜನ ಬೋಳನ್ನವರ, ಪುರಸಭೆ ಮಾಜಿ ಸದಸ್ಯರಾದ ಮಹಾಂತೇಶ ತುರಮರಿ, ರಾಜು ಜನ್ಮಟ್ಟಿ, ಬಾಬು ಕುಡಸೋಮಣ್ಣವರ, ವಿಶ್ವಹಿಂದು ಪರಿಷದ್ ಜಿಲ್ಲಾ ಉಪಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ತಾಲ್ಲೂಕು ಘಟಕ ಅಧ್ಯಕ್ಷ ಕಾಶಿನಾಥ ಬಿರಾದಾರ, ಉಪಾಧ್ಯಕ್ಷ ಶಿವಾನಂದ ಬಡ್ಡಿಮನಿ, ಸೋಮನಾಥ ಸೊಪ್ಪಿಮಠ, ಮಹೇಶ ಬೆಲ್ಲದ, ಪ್ರಫುಲ ಪಾಟೀಲ, ಅಶೋಕ ಸವದತ್ತಿ, ವಿವೇಕಾನಂದ ಪೂಜಾರ, ರವೀಂದ್ರ ಜೂಂಜಾಳೆ, ಮಹಾಂತೇಶ ಹೊಸೂರ, ಸಚಿನ ಚೀಲದ, ದಯಾನಂದ ಗೆಜ್ಜಿ, ಗೌತಮ ಇಂಚಲ, ಬಸವರಾಜ ಈಟಿ, ಮಲ್ಲಿಕಾರ್ಜುನ ಏಣಗಿಮಠ, ವಿಠ್ಠಲ ದಾಸೋಗ, ಸುಭಾಸ ತುರಮರಿ ಇತರರು ಇದ್ದರು. ಬಾಲಕಿ ನಿಸರ್ಗ ನಂದಿ ಪ್ರಭುಶ್ರೀರಾಮನ ವೇಷಧರಿಸಿ ನೋಡುಗರ ಕಣ್ಮನ ಸೆಳೆದಳು. ಬಾಲಕ, ಬಾಲಕಿಯರು, ಯುವಕರು, ಹಿರಿಯರು ನವದುರ್ಗೆಯರಿಗೆ, ಹನುಮಂತ, ಶ್ರೀರಾಮನಿಗೆ ಜಯಘೋಷ ಮೊಳಗಿಸಿದರು.
ಗ್ರಾಮದೇವಿ ದೇವಸ್ಥಾನದಲ್ಲಿ ಗ್ರಾಮದೇವಿಯರಿಗೆ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದಿಂದ ಆರಂಭವಾದ ದೌಡ್ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಳಿ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ಬಂದು ತಲುಪಿತು.










