ಪೊಲೀಸರ ಮೂಲಕ ಹಿಂದೂಗಳಿಗೆ ರಾಜ್ಯ ಸರ್ಕಾರ ತೊಂದರೆ ಕೊಡುತ್ತಿದೆ ಪ್ರಮೋದ ಮುತಾಲಿಕ ಗಂಭೀರ ಆರೋಪ
- shivaraj B
- 8 Sep 2024 , 3:04 PM
- Hukkeri
- 568
ಹುಕ್ಕೇರಿ : ವರ್ಷಕ್ಕೊಮ್ಮೆ ಗಣೇಶ ಹಬ್ಬವನ್ನು ಹಿಂದೂಗಳು ಅದ್ದೂರಿಯಿಂದ ಆಚರಣೆ ಮಾಡುತ್ತಾರೆ ಆದರೆ ಈ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂದು.

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಗಂಭೀರವಾಗಿ ಆರೋಪಿಸಿದರು.
ಅವರು ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಗಣೇಶ ಉತ್ಸವಗಳಲ್ಲಿ ಡಿಜೆ ಸೌಂಡ್ ಬಳಕೆ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
ಪೊಲೀಸ್ ಇಲಾಖೆ ಮುಖಾಂತರ ಸರ್ಕಾರ ಹಿಂದೂಗಳಿಗೆ ತೊಂದರೆ ಕೊಡುತ್ತಿದೆ ಎಂದರು.
ಸುಪ್ರೀಂ ಕೋರ್ಟ್ ಆದೇಶವಿದೆ ಹೀಗಾಗಿ ಡಿಜೆ ಸೌಂಡ್‌ಗಳನ್ನು ತೆರವುಗೊಳಿಸ್ತಿದ್ದೇವೆ ಅಂತ ಪೊಲೀಸರು ಹೇಳುತ್ತಾರೆ ಅದೇ ರೀತಿ ಮಸೀದಿಗಳಲ್ಲಿ ಅಳವಡಿಸಿರುವ ಮೈಕ್ ಸಂಬಂಧಿಸಿದಂತೆಯೂ ಸುಪ್ರೀಂ ಕೋರ್ಟ್‌ನ ಆದೇಶವಿದೆ.
ಪ್ರತಿನಿತ್ಯ ಮಸೀದಿಗಳ ಮೈಕ್ ಮುಖಾಂತರ ಮುಸ್ಲಿಂರು ಪ್ರಾರ್ಥನೆ ಮಾಡುತ್ತಾರೆ ಇದರಿಂದಾಗಿ ನಾವುಗಳು ಪ್ರತಿನಿತ್ಯ ತೊಂದರೆ ಎದುರಿಸುತ್ತಿದ್ದೇವೆ.
ಇದರ ಬಗ್ಗೆ ಸರ್ಕಾರವಾಗಲಿ, ಪೊಲೀಸ್ ಇಲಾಖೆ ಆಗಲಿ ಮಾತನಾಡುವುದಿಲ್ಲ ಎಂದರು.
ಆದ್ರೆ ವರ್ಷಕ್ಕೊಮ್ಮೆ ಆಚರಿಸುವ ಗಣೇಶ ಹಬ್ಬದ ಡಿಜೆ ಸೌಂಡ್ ಬಗ್ಗೆ ತಕರಾರು ಮಾಡ್ತಾರೆ.
ಹೀಗಾಗಿ ಹಿಂದೂಗಳು ಇದ್ಯಾವುದನ್ನು ಲೆಕ್ಕಿಸದೇ ಗಣೇಶೊತ್ಸವಗಳಲ್ಲಿ ಡಿಜೆ ಸೌಂಡ್ ಬಳಕೆ ಮಾಡುವಂತೆ ಪ್ರಮೋದ್ ಮುತಾಲಿಕ್ ಕರೆ ನೀಡಿದರು.











