ಬೆಳಗಾವಿ ಉತ್ತರದಲ್ಲಿ ಭರ್ಜರಿ ಪ್ರಚಾರ ನಡೆಸಿದ ಪ್ರವೀಣ ಹಿರೇಮಠ

ಬೆಳಗಾವಿ : ಬೆಳಗಾವಿ ಉತ್ತರ ಮತ ಕ್ಷೇತ್ರದ ಶ್ರೀನಗರ ಹಾಗೂ ವಂಟಮುರಿ ಕಾಲೋನಿಯಲ್ಲಿ ಭರ್ಜರಿ ಮತ ಭೇಟೆ ನಡೆಸಿದ ಪ್ರವೀಣ ಹಿರೇಮಠ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಮತ ನೀಡುವಂತೆ ನಿವಾಸಿಗಳಲ್ಲಿ ಕೇಳಿಕೊಂಡಿದ್ದಾರೆ.

promotions

ಇಂಗ್ಲೆಂಡ್ ದೇಶದ ಗ್ಲಾಸ್ಗೋದಲ್ಲಿ ಮರ್ಚಂಟ್ ನೇವಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಬೆಳಗಾವಿ‌ ಮೂಲದ ಯುವಕನೊರ್ವ ವಿದೇಶಿ ಕೆಲಸಕ್ಕೆ ಗೂಡ್ ಬೈ ಹೇಳಿ ತಾಯ್ನಾಡಿನ ಸೇವೆ ಮಾಡಬೇಕೆಂದು ರಾಜಕೀಯಕ್ಕೆ ಧುಮುಕ್ಕಿದ್ದಾರೆ.

promotions

ಹೌದು ಸುಶಿಕ್ಷಿತರ ಸಂಖ್ಯೆಯೇ ಹೆಚ್ಚಿರುವ ಬೆಳಗಾವಿ ಉತ್ತರ ಕ್ಷೇತ್ರದಿಂದ ಎನ್.ಆರ್.ಐ. ಪ್ರವೀಣ ಹಿರೇಮಠ ಈ ಬಾರಿಯ ವಿಧಾನಸಭೆ ಚುನಾವಣೆಗೆ ಜನಾರ್ಧನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸಿದ್ದು, ಮನೆ ಮನೆಗೆ ತೆರಳಿ ತಮಗೆ ಮತ ನೀಡಿ ಆಶೀರ್ವದಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಅಲ್ಲದ ಪ್ರವೀಣ ಹಿರೇಮಠ‌ ಅವರಿಗೆ ಕಾಲೇಜು ವಿದ್ಯಾರ್ಥಿಗಳು ಕೂಡ ಸಾಥ್ ಕೊಟ್ಟಿದ್ದಾರೆ.

ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ  ಅಭ್ಯರ್ಥಿ ಪ್ರವೀಣ ಹಿರೇಮಠ, ಅತ್ಯಂತ ಭರ್ಜರಿಯಾಗಿ ನನ್ನ ಪ್ರಚಾರ ನಡೆಯುತ್ತಿದೆ. ಎಲ್ಲ ಮತದಾರರಿಂದ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಉತ್ತರ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದು, ಯಾವುದೇ ರೀತಿ ಹಣ ಬಲಕ್ಕೆ ಜನ ಮರಳಾಗುವುದಿಲ್ಲ. ಎಲ್ಲ ಭಾಷಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದರು.

ನಾಸಾದಲ್ಲಿ ಶೇ.50ರಷ್ಟು ಭಾರತೀಯರೇ ಇದ್ದಾರೆ. ನಮ್ಮ ಎನ್ ಆರ್ ಐ ಗಳು ಬೇರೆ ದೇಶ ಬಲಿಷ್ಠಗೊಳಿಸುತ್ತಿದ್ದಾರೆ, ಅಂತವರು ನಮ್ಮ ದೇಶಕ್ಕೆ ಬಂದು ಈ ದೇಶ ಬಲಿಷ್ಠಗೊಳಿಸಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದ‌ ಪ್ರವೀಣ ಹಿರೇಮಠ, ಬೆಳಗಾವಿಗೆ ಐಟಿಬಿಟಿ ಕಂಪನಿ ತರಬೇಕಿದೆ. ಇದು ನನ್ನೊಬ್ಬನಿಂದ ಸಾಧ್ಯವಿಲ್ಲ. ಹೀಗಾಗಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ ಖಂಡಿತವಾಗಲೂ‌ ಐಟಿಬಿಟಿ‌ ಕಂಪನಿ ತಂದು ಇಲ್ಲಿನ ಯುವಕರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಮತ್ತು ಮುಂದಿನ ಉದ್ದೇಶಗಳ ಬಗ್ಗೆ ಮಾಧ್ಯಮದವರೊಂದಿಗೆ ಹಂಚಿಕೊಂಡ ಪ್ರವೀಣ್ ಕಲ್ಯಾಣ್ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಜನ ಸ್ನೇಹಿ ಪ್ರಣಾಳಿಕೆಯಾಗಿದ್ದು  ಕರುನಾಡಿನ ಜನತೆಯ ಮೆಚ್ಚುಗೆ ಪಡೆದಿದೆ ಎಂದು ಹೇಳಿದ್ದಾರೆ.

ಒಟ್ಟಾರೆ ಹಲವು ಕನಸು, ಯೋಜನೆ ಹಾಕಿಕೊಂಡು ಚುನಾವಣಾ ಕಣದಲ್ಲಿರುವ ಪ್ರವೀಣ ಹಿರೇಮಠ ಅವರಿಗೆ ಇಲ್ಲಿನ  ಮತದಾರರು ಆಶೀರ್ವಾದ ಮಾಡಿ ಎಂದು ಪ್ರವೀಣ್ ಕೇಳಿಕೊಂಡಿದ್ದಾರೆ .

Read More Articles