ಪ್ರವೀಣ್ ನೆಟ್ಟಾರು ಕೇಸ್ : ಆರೋಪಿಗಳ ಸುಳಿವುಕೊಟ್ಟವರಿಗೆ 5 ಲಕ್ಷ ಬಹುಮಾನ ಘೋಷಿಸಿದ NIA
- 14 Jan 2024 , 9:48 PM
- Uttara Kannada
- 132
26 ಜುಲೈ 2022ರಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರು ಅವರನ್ನು ಸಮಾಜದ ಜನರಲ್ಲಿ ಭಯ ಹುಟ್ಟಿಸಲು ಹರಿತವಾದ ಆಯುಧ ಬಳಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ 2 ಆರೋಪಿಗಳನ್ನು ಹುಡುಕುತ್ತಿದೆ.

ಕೊಡಾಜೆ ಮೊಹಮ್ಮದ್ ಶೆರೀಫ್, 53, ಮತ್ತು ಮಸೂದ್ ಕೆಎ, 40, ಎಂಬ ಇಬ್ಬರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಲಾ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.

ಮೇಲೆ ತಿಳಿಸಿದ ಆರೋಪಿಗಳ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿಯನ್ನು ಒದಗಿಸುವವರಿಗೆ ಬಹುಮಾನ ನೀಡಲಾಗುತ್ತದೆ ಮತ್ತು ಮಾಹಿತಿದಾರರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ತಿಳಿಸಿದೆ.
ಯಾವುದೇ ಮಾಹಿತಿ ತಿಳಿಸಲು info.blr.nia@gov.in ಇಮೇಲ್ಮಾಡಿ. ಅಥವಾ 080-29510900 ಕರೆಮಾಡಿ 8904241100 ಕರೆಮಾಡಿ ಅಂಚೆ ವಿಳಾಸ: ಎಸ್ಪಿ, ನ್ಯಾಶನಲ್ ಇನ್ವೆಸ್ಟಿಗೇಷನ್ ಏಜೆನ್ಸಿ, 8ನೇ ಮಹಡಿ, ಸರ್ ಎಂ ವಿಶ್ವೇಶ್ವರಯ್ಯ ಕೇಂದ್ರೀಯ ಭವನ್, ದೊಮ್ಲೂರ್, ಬೆಂಗಳೂರು-560071 ಸಂಪರ್ಕಿಸಲು ತಿಳಿಸಿದೆ.










