ದೇಶ,ವಿದೇಶ ಸುತ್ತಿದರು ಧರ್ಮ, ಸಂಸ್ಕೃತಿ ಮತ್ತು ಭಾಷೆ ಮರೆಯದ ಪ್ರವೀಣ ಹಿರೇಮಠ

ಬೆಳಗಾವಿ : ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡ ಬೇಡ ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೆ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಇದೆ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ ವಚನದ ಮೂಲಕ ಜಗದ್ಗುರು ಅಣ್ಣ ಬಸವಣ್ಣವರನ್ನು ನೆನೆದು ಮಾತು ಪ್ರಾರಂಭಿಸಿದ ಪ್ರವೀಣ ವಿಭೂತಿಯ ಮಹತ್ವ ತಿಳಿಸಿದ್ದಾರೆ.

promotions

ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ಬೆಳಗಾವಿಯ ಸಕಲ ಜನತೆಗೆ ಬಸವ ಜಯಂತಿಯ ಶುಭಾಶಯಗಳನ್ನು ತಿಳಿಸಿದ ಪ್ರವೀಣ ಹಿರೇಮಠ ಅಣ್ಣ ಬಸವಣ್ಣ ಅವರ ವಚನಗಳನ್ನು ನೆನೆದು ಮಾತನಾಡಿದ್ದಾರೆ , ಬಸವಣ್ಣನವರ ಪರಂಪರೆ ಕರ್ನಾಟಕ ಮತ್ತು ಅದರಾಚೆಗಿನ ಜನರಿಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಪ್ರವೀಣ ಹೇಳಿದ್ದಾರೆ.

promotions

ಸಾಮಾಜಿಕ ನ್ಯಾಯ, ಸಹಾನುಭೂತಿ ಮತ್ತು ಆಧ್ಯಾತ್ಮಿಕತೆಯ ಕುರಿತು ಬಸವಣ್ಣವರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಅನೇಕ ವ್ಯಕ್ತಿಗಳು ಮತ್ತು ಸಾಮಾಜಿಕ ಚಳುವಳಿಗಳಿಗೆ ಸ್ಫೂರ್ತಿಯ ಮೂಲವಾಗಿದೆ ಎಂದು ಹೇಳಿದ್ದಾರೆ.

ಯಾವುದೇ ಜಾತಿ ಮತ ಭೇದ ಇಲ್ಲದೆ ಲಿಂಗವನ್ನು ಧರಿಸುವ ಪ್ರತಿಯೊಬ್ಬರು ಲಿಂಗಾಯತರು ಎಂದು ಹೇಳಿದ ಪ್ರವೀಣ ಲಿಂಗ ಪೂಜೆ ಮತ್ತು ಲಿಂಗ ಪೂಜೆಯ ಮಹತ್ವ ತಿಳಿಸಿದ್ದಾರೆ.

ನಾನು 86 ದೇಶ ಸುತ್ತಿದರು ನಾನು ನನ್ನ ಧರ್ಮ ,ಭಾಷೆ ಮತ್ತು ನನ್ನ ಸಂಸ್ಕೃತಿಯನ್ನು ಮರೆತಿಲ್ಲ ಎಂದು ಹೇಳಿದ್ದಾರೆ.ಯಾವುದೇ ಜಾತಿ ಧರ್ಮ ಅನ್ನದೆ ಜಗತ್ತಿನ ಒಳಿತಿಗಾಗಿ ಬಸವಣ್ಣವರು ಲಿಂಗಾಯತ ಧರ್ಮದ ಮೂಲಕ ಲೋಕ ಕಲ್ಯಾಣಕ್ಕಾಗಿ ಕರೆ ನೀಡಿದ್ದಾರೆ ಎಂದು ಪ್ರವೀಣ್ ಹಿರೇಮಠ ತಿಳಿಸಿದ್ದಾರೆ.

Read More Articles