ಚುಟುಕು ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ಹುದ್ದಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯ ಹುದ್ದಾರ ಅಭಿಮತ

ಅಥಣಿ : ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಪ್ರತಿಯೊಂದು ಶಾಲೆಗಳಿಗೆ ತೆರಳಿ ಮಕ್ಕಳಲ್ಲಿ ಸಾಹಿತ್ಯ ಆಸಕ್ತಿಯು ಬೆಳೆಯುವಂತೆ ಶಾಲೆಗೊಂದು ಚುಟುಕುಗೋಷ್ಠಿ ಹಮ್ಮಿಕೊಂಡು ಬೇರು ಮಟ್ಟದಿಂದ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸುತ್ತಿರುವುದು ವಿಶೇಷ ಕೆಲಸ ಎಂದು ಹುದ್ದಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯ ಹುದ್ದಾರ ಅವರು ಹೇಳಿದರು.

promotions

ಅವರು ತಾಲೂಕಿನ ಬಳ್ಳಿಗೇರಿ ಗ್ರಾಮದ ಬಿ ಬಿ ಇಮ್ಮಡಿ ಸರಕಾರಿ ಪ್ರೌಢಶಾಲೆಯಲ್ಲಿ ಅಥಣಿ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಅಥಣಿ ತಾಲೂಕಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ 'ಶಾಲೆಗೊಂದು ಚುಟುಕುಗೋಷ್ಠಿ' ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಕನ್ನಡ ಭಾಷೆಗೆ ಹಲವಾರು ವರ್ಷಗಳ ಇತಿಹಾಸವಿದೆ. ಅಳಿಸಿದರೂ ಅಳಿಯದ ಭಾಷೆಗೆ ಚುಟುಕುಗೋಷ್ಠಿಗಳನ್ನು ಹಮ್ಮಿಕೊಂಡು ನೂತನವಾಗಿ ಯುವ ಕವಿಗಳನ್ನು ಸಾಹಿತ್ಯದ ಕಡೆಗೆ ಸೆಳೆಯುತ್ತಿರುವುದು ವಿಶೇಷ ಎಂದರು.

promotions

ಅನಂತರ ಚುಟುಕು ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷ ಅಪ್ಪಾಸಾಹೇಬ ಅಲಿಬಾದಿ ಮಾತನಾಡಿ ಕವನಗಳ ರಚನೆ ಪ್ರಾರಂಭವಾಗುವುದೇ ಚುಟುಕುಗಳಿಂದ ಅಂತಹ ಚುಟುಕು ಕಟ್ಟುವ ಕಲೆಯನ್ನು ಮಕ್ಕಳಿಗೆ ಹೇಳಿಕೊಡುವುದು ನಮ್ಮ ಕರ್ತವ್ಯ ಎಂದರು.

ಅನಂತರ ಮುಖ್ಯ ಶಿಕ್ಷಕ ಎಮ್ ಎಸ್ ನ್ಯಾಮಗೌಡ, ಅಥಣಿ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ಬಡಕಂಬಿ, ಚುಟುಕು ಸಾಹಿತ್ಯ ಪರಿಷತ್ ಅಥಣಿ ಘಟಕ ಅಧ್ಯಕ್ಷ ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ, ಕಾರ್ಯದರ್ಶಿ ಶಶಿಧರ ಬರ್ಲಿ ಅವರು ಮಾತನಾಡಿದರು. ಈ ವೇಳೆ ಹಿರಿಯ ಸಾಹಿತಿ ಎಸ್ ಕೆ ಹೊಳೆಪ್ಪನ್ನವರ, ಶಿಕ್ಷಕರಾದ ಆರ್ ಪಿ ತಾಂಬೆ, ಎಲ್ ಎಸ್ ಪಾಟೀಲ, ಬಿ ಡಿ ಕರಿಸಾಬು, ಪಿ ಡಿ ದಳವಾಯಿ, ಎಮ್ ಎಮ್ ಬುರ್ಲಿ, ಸಿ ಬಿ ಬಕಾರಿ, ಎಸ್ ಐ ಸಣಪೇಟ, ಡಿ ಬಿ ಪಾಟೀಲ, ಕೆ ಆರ್ ರಾಠೋಡ, ಟಿ ಬಿ ಪಡಸಲಗಿ, ಎಸ್ ಯು ಚವ್ಹಾಣ, ಮಲ್ಲಪ್ಪಾ ಮಾಳಿ, ಸತ್ಯಪ್ಪಾ ಕೋಳಿ, ಸದಾಶಿವ ಮುಡಸಿ, ಬಸವರಾಜ ಹಿಪ್ಪರಗಿ ಸೇರಿದಂತೆ ಇತರರಿದ್ದರು. ಸ್ಪರ್ಧೆಯಲ್ಲಿ ಒಟ್ಟು 87 ಜನ ಸ್ಪರ್ಧಾಳುಗಳು ಭಾಗಿಯಾಗಿದ್ದರು.

ವರದಿ : ರಾಹುಲ್ 

Read More Articles