ಡಿ.4 ರಂದು ಛಲವಾದಿ ಸಮಾಜದ ಸಭೆ: ಮಲ್ಲೇಶ

ಬೆಳಗಾವಿ :SC STಸಮಾಜ ರಾಜ್ಯದಲ್ಲಿ ಸುಮಾರು‌ 2 ಕೋಟಿ ಜನಸಂಖ್ಯೆ ಹೊಂದಿದೆ. ಬರುವ ಡಿ.4 ರಂದು ಬೆಳಗಾವಿಯ ಅಂಜುಮನ ಸಭಾಂಗಣದಲ್ಲಿ ಛಲವಾದಿ ಸಮುದಾಯದಲ್ಲಿ ಸಭೆ ಕರೆಯಲಾಗಿದೆ ಎಂದು ಛಲವಾದಿ ಸಮಾಜದ ಮಲ್ಲೇಶ ಚೌಗುಲೆ ಹೇಳಿದರು.

promotions

ಶುಕ್ರವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು‌. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳು. ನಮ್ಮ ಸಮುದಾಯಕ್ಕೆ ಸಿಗುತ್ತಿಲ್ಲ. ನಮ್ಮ‌ ಸಮಾಜದ ಮಹಿಳೆಯರ ಮೇಲಿನ ದೌರ್ಜನ್ಯವಾಗುತ್ತಿದ್ದರೂ ನ್ಯಾಯ ಸಿಗುತ್ತಿಲ್ಲ‌. ಎಸ್ಪಿಪಿ, ಟಿಎಸ್ಪಿ ಅನುದಾನ ಸರಿಯಾಗಿ ಸದ್ಬಳಕೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

promotions

ಎಸ್ಸಿ, ಎಸ್ಟಿ ಸಮುದಾಯದ ಎಲ್ಲ ಉಪ ಪಂಗಡಗಳನ್ನು ತೆಗೆದುಕೊಂಡು ಹೋಗುವ ಕೆಲಸವನ್ನು ಛಲವಾದಿ ಸಮಾಜದವರು ಮಾಡಲಿದ್ದೇವೆ. ನಮ್ಮ ಸಮಾಜದ ಶಾಸಕ ಪ್ರಸಾದ್ ಅಬ್ಬಯ್ಯ, ಸುಭಾಷ ನಾಟೇಕರ ಸೇರಿದಂತೆ ಇನ್ನಿತರರ ನಾಯಕರ ಜೊತೆಗೆ ಸಭೆ ನಡೆಸಲಿದ್ದೇವೆ ಎಂದರು.

ಛಲವಾದಿ ಸಮಾಜದ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕಿದೆ. ಈ ನಿಟ್ಟಿನಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನದ ಸಂದರ್ಭದಲ್ಲಿ ನಮ್ಮ ಸಮಾಜದ ಸಮಸ್ಯೆ ಹಾಗೂ ಮುಂದೆ ಆಗುವ ಸೌವಲತ್ತುಗಳನ್ನು ಆಲಿಸಲು ಸಭೆ ಕರೆಯಲಾಗಿದೆ ಎಂದರು.

ಶ್ರೀಕಾಂತ್ ಮುಚ್ಚಂಡಿ, ದುರ್ಗೆಶ ಮೇತ್ರಿ, ಸುರೇಶ ತಳವಾರ, ಮಹಾದೇವ ತಳವಾರ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.

Read More Articles