ವೀರ ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್ ತಲುಪಿದ ಪ್ರಧಾನಿ
- 15 Jan 2024 , 2:40 AM
- Jammu&Kashmir
- 285
ಕಳೆದ ಬಾರಿಯಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಇಂದು ಪ್ರಧಾನಿ ಬೆಳಿಗ್ಗೆ ಕಾರ್ಗಿಲ್ ತಲುಪಿದ ಪ್ರಧಾನಿ ಸೈನಿಕರನ್ನು ಭೇಟಿಯಾದ ನಂತರ ಸಂಜೆ ದೀಪಾವಳಿಯ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Prime Minister Shri @narendramodi has landed in Kargil, where he will celebrate Diwali with our brave soldiers. pic.twitter.com/RQxanDEgDK

ವೀರ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿರುವ ಪ್ರಧಾನಿ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಜಂಟಿ ರಾಜಧಾನಿಯಾದ ಕಾರ್ಗಿಲ್ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಮೋದಿ ಅವರು ಪ್ರಧಾನಿ ಹುದ್ದೆಗೆ ಆಯ್ಕೆಯಾದಾಗಿನಿಂದ ಪ್ರತಿ ವರ್ಷವೂ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಾರೆ.










