ಮಾಡುವ ಕೆಲಸಗಳೇ ಮಾತಾಗುವಂತೆ ಅಭಿವೃದ್ಧಿಗೆ ಆದ್ಯತೆ: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: "ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕಿಯಾಗುವ ಮುನ್ನ ಕೊಟ್ಟಂತಹ ಎಲ್ಲ ಭರವಸೆಗಳನ್ನು ಈಡೇರಿಸುತ್ತಾ‌ ಬಂದಿದ್ದೇನೆ, ನಾಣ್ಣುಡಿಯಂತೆ ಮಾತುಗಳು ಕೆಲಸವಾಗಬಾರದು, ನಾವು ಮಾಡುವ ಕೆಲಸಗಳೇ ಮಾತಾಗಬೇಕು ಎನ್ನುವಂತೆ ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆ ನೀಡುತ್ತ ಬಂದಿದ್ದೇನೆ" ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. 

promotions

ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆ ಕೆ ಕೊಪ್ಪ ಗ್ರಾಮದ ಶ್ರೀ ಭೀಮ ಅಜ್ಜನವರ ಕನಸಾಗಿದ್ದ ಶ್ರೀ ಸಿದ್ಧೇಶ್ವರ ದೇವಸ್ಥಾನದ ನೂತನ ಕಟ್ಟಡದ ಅಡಿಗಲ್ಲು ಸಮಾರಂಭದ ಪೂಜೆಯಲ್ಲಿ ಭಾಗವಹಿಸಿ, ಮಾತನಾಡಿದರು.  ಎಂದಿನಂತೆ ಜನತೆಯ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ತಮ್ಮ ಮೇಲಿರಲೆಂದು ಸದಾಕಾಲವೂ ಆಶಿಸುವುದಾಗಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.  ಶ್ರೀ  ಭೀಮಾನಂದ ಅಜ್ಜನವರು ಹಾಗೂ ಸಿದ್ಧಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮದರಾದ ರಾಮನಗೌಡ ಪಾಟೀಲ, ಸಂತೋಷ ಕಂಬಿ, ದುಂಡಯ್ಯ ಗುರುಗಳು, ಬೆಂಡಿಗೇರಿ ಗುರುಗಳು, ಸುರೇಶ ಕಂಬಿ, ಚಂಬಯ್ಯ ಹಿರೇಮಠ, ಹಾಲಪ್ಪ ಡೊಂಗರಗಾಂವಿ, ಕಲ್ಲಪ್ಪ ಸಂಪಗಾಂವಿ, ದುಂಡಪ್ಪ ಹಲಕಿ, ಗುರು ಕಾಕಾ, ಶಿದ್ರಾಯಿ ಗಾಣಗಿ, ಬಸು ಡೊಂಗರಗಾಂವಿ, ಗದಗಯ್ಯ ಹಿರೇಮಠ, ಸುಭಾಷ ಡೊಂಗರಗಾಂವಿ, ಶಿದ್ರಾಯಿ ವಾಲಿ, ದೇವರಾಜ ಕೋಲಕಾರ, ರಾಮಾಜೀ ತಳವಾರ, ರವಿ ಸುರಕಿ, ಅಯ್ಯಪ್ಪ ಮಾವಿನಕಟ್ಟಿ, ಪಗಾದ ಅಜ್ಜ ನಾಗೇರಹಾಳ, ಶಿವಪ್ಪ ಗುಂಡುಗೋಳ ನಾಗೇರಹಾಳ, ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು, ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

promotions

Read More Articles