ವಿವಿಧ ಬೇಡಿಕೆ‌ ಈಡೇರಿಸುವಂತೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಬೆಳಗಾವಿ :ಆರ್ ಸಿಎಚ್ ಪೋರ್ಟಲ್ ನ ವಿವಿಧ ಸಮಸ್ಯೆಗಳ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಾರ್ಯಕರ್ತೆಯರಿಗೆ ಆಗಿರುವ ಆರ್ಥಿಕ‌ ನಷ್ಟ‌ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ‌ ಈಡೇರಿಸುವಂತೆ ಆಗ್ರಹಿಸಿ ‌ಮಂಗಳವಾರ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸುವರ್ಣ ವಿಧಾನಸೌಧದ ಬಳಿ ಇರುವ ಬಸ್ತವಾಡದಲ್ಲಿ ಪ್ರತಿಭಟನೆ ನಡೆಸಿದರು.

promotions

ಆರ್ ಸಿಎಚ್ ಪೋರ್ಟಲ್ ನಲ್ಲಿ ಇರುವ ಅಗಣಿತ ಸಮಸ್ಯೆಗಳ ಕಾರಣಗಳಿಂದ ಮಾಡಿದ ಹಲವಾರು ಕೆಲಸಗಳಿಗೆ ಹಣ ಬರುತ್ತಿಲ್ಲ. ಕಳೆದ ಎರಡೂ ವರ್ಷದಿಂದ ಕೋವಿಡ್ ನಾನ್ ಎಮ್ ಟಿಸ್ 2,000 ರೂ. ಟೀಮ್ ಬೆಸ್ಡ್ ಇನ್ ಸೆಂಟಿವ್ ಯಾರಿಗೆ ಬಂದಿಲ್ಲ ಅವರಿಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

promotions

ನಗರದ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಇಲ್ಲ. ಆದ್ದರಿಂದ ಅವರ ಗೌರವ‌ ಧನವನ್ನು ಹೆಚ್ಚಿಗೆ ಮಾಡಿ ಸರಕಾರ ಆದೇಶ ಮಾಡಬೇಕು. ಅಲ್ಲದೆ, ಆಶಾ ಸುಗಮಕಾರರನ್ನು ಆಶಾಯಿಂದ ಬೇರ್ಪಡಿಸಿ ಅವರ  ಹುದ್ದೆಗೆ ತಕ್ಕಂತೆ ಮಾಸಿಕ‌ ಗೌರವ ಧನ ಮತ್ತು ಪ್ರಮಾಣ ಭತ್ಯೆಗಳನ್ನು ನಿಗದಿ ಮಾಡಬೇಕೆಂದು ಒತ್ತಾಯಿಸಿದರು.

ಡಿ.ನಾಗಲಕ್ಣ್ಮೀ, ಕೆ.ಸೋಮಶೇಖರ, ದೀಪಾ ಹೂಗಾರ, ಮಂಜುಳಾ ಕಾಶಪ್ಪನವರ, ಜ್ಯೋತಿ‌ ಹೊಂಗಲ ಸೇರಿದಂತೆ ‌ಇನ್ನಿತರರು ಉಪಸ್ಥಿತರಿದ್ದರು.

Read More Articles