ಹಲುವು ಬೇಡಿಕೆಗಳಿಗಾಗಿ ಬಿಸಿಯೂಟ ತಯಾರಕರಿಂದ ಪ್ರತಿಭಟನೆ
- 14 Jan 2024 , 5:53 AM
- Belagavi
- 1133
ಬೆಳಗಾವಿ :ಕರ್ನಾಟಕ ರಾಜ್ಯದಲ್ಲಿ ಅಕ್ಷರದಾಸೋಹ ಯೋಜನೆಯಲ್ಲಿ 1,18,586 ಜನ ಮಹಿಳೆಯರು ಕಾರ್ಯನಿರ್ವಸುತ್ತಿದ್ದಾರೆ. ಯೋಜನೆಯ ಆರಂಭದಲ್ಲಿ ಮುಖ್ಯ ಅಡುಗೆಯವರಿಗೆ ಮಾಸಿಕ ರೂ 650/- ಮತ್ತು ಅಡುಗೆ ಸಹಾಯಕರು ರೂ 400/- ಇದ್ದು, 3 ಮತ್ತು 4 ನೇ ಅಡುಗೆ ಸಹಾಯಕರಿಗೆ ರೂ 300/- ಗಳನ್ನು ನೀಡಲಾಗುತ್ತಿತ್ತು. 19 ವರ್ಷಗಳ ಅಲ್ಪಸಂಭಾವನೆಯಲ್ಲಿ ಕೆಲಸ ನಿರ್ವಹಿಸತ್ತಿದ್ದರೂ ಈಗ ಸದ್ಯ ಕೊಡತ್ತಿರುವ ಮಾಸಿಕ ಸಂಭಾವನೆ ಮುಖ್ಯ ಅಡುಗೆಯವರಿಗೆ ಮಾಸಿಕ ರೂ.3700/- ಮತ್ತು ಆಡುಗೆ ಸಹಾಯಕರು ರೂ 3600/- ಮಾತ್ರ ನೀಡಲಾಗುತ್ತಿದೆ. ನಿವೃತ್ತ ವೇತನ, ಇಎಸ್‌ಐ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ, ಆದಾಗ್ಯೂ ಇವರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿದ್ದು ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ಸಾಗಿಸುವುದು ಅತ್ಯಂತ ಕಷ್ಟದಾಯಕವಾಗಿದ್ದು, 2021 ರಿಂದ ನಿರಂತರವಾಗಿ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹಲವಾರು ಭಾರಿ ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಮಾನ್ಯ ಪ್ರಧಾನಮಂತ್ರಿಗಳಿಗೆ ಮತ್ತು ತಮಗೂ ಕೂಡಾ ಅನೇಕ ಬಾರಿ ಮನವಿ ಪತ್ರಗಳನ್ನು ನಿರಂತರವಾಗಿ ಸಲ್ಲಿಸಿದೆ.

ಕೇಂದ್ರ ಸರ್ಕಾರವು 2002-03 ರಿಂದ ಯೋನೆ ಆರಂಭಿಸಿದರೂ ಕೇವಲ ಮಾಸಿಕ ವೇತನ 600/- ಮಾತ್ರ ಕೊಡತ್ತಿದೆ. ವೇತನ ಹೆಚ್ಚಿಸಬೇಕೆಂದು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಳೆದ 19 ವರ್ಷಗಳಿಂದ ನಿರಂತರವಾಗಿ ರಾಜ್ಯದ ಜಿಲ್ಲೆ, ತಾಲೂಕ ಮತ್ತು ಮಟ್ಟದಲ್ಲಿ ನಿರಂತರ ಹೋರಾಟ ಚಳುವಳಿ ನಡೆಸಿ ಮನವಿ ಪತ್ರ ಸಲ್ಲಿಸಿದರೂ ದುಡಿಯುವ ವರ್ಗದ ಮಹಿಳೆಯರಿಗೆ 1ರೂಪಾಯಿ ಕೂಡಾ ಹೆಚ್ಚಳ ಮಾಡದೆ ಇರುವುದು ಖಂಡನೀಯ.

2022-23 ನೇ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ಇವರಿಗೆ ಕೂಡಾ ಹಲವಾರು ಬಾರಿ ಹೋರಾಟ ಚಳುವಳಿ ನಡೆಸಿ ರಾಜ್ಯಾದಂತ್ಯ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರ ಫಲವಾಗಿ 04-03-2022 ರ ಪ್ರಥಮ ಬಜೆಟ್‌ನಲ್ಲಿ ರೂ 1000/- ಹೆಚ್ಚಳ ಮಾಡಿದಕ್ಕೆ ಸಂಘಟನೆ ಪರವಾಗಿ ಕೃತಜ್ಞೆತಗಳನ್ನು ಸಲ್ಲಿಸಿ, ಈಗಾಗಲೇ ಬೇರೆ ರಾಜ್ಯಗಳಾದ ಕೇರಳ, ತಮಿಳನಾಡು, ತೆಲಂಗಾಣ ಸರ್ಕಾರಗಳು ಅಕ್ಷರದಾಸ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ರಾಜ್ಯ ಇತರೆ ಬೇಡಿಕೆಗಳನ್ನು ಈಡೇರಿಸಿದ್ದು ಆ ಮಾದರಿಯಲ್ಲಿ ತಾವುಗಳು ಸಹ ನಮಗೆ ಮಾಸಿಕ ಕನಿಷ್ಠ ವೇತನ 31000/- ನೀಡಬೇಕು. ಈ ಕುರಿತು ತಮ್ಮ ದ್ವಿತೀಯ ಬಜಟ್ 2023-24 ನೇ ಸಾಲಿನಲ್ಲಿ ಮಾಸಿಕ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.










