ಸಮ್ಮೇದ ಶಿಖರವನ್ನು ಪ್ರವಾಸಿ ಸ್ಥಳವಾಗಿ ಮಾರ್ಪಡಿಸುವ ಕೇಂದ್ರದ ಯತ್ನವನ್ನು ನಿಲ್ಲಿಸಲು ಜೈನ್ ಸಮುದಾಯದಿಂದ ಪ್ರತಿಭಟನೆ
- 15 Jan 2024 , 1:34 AM
- Belagavi
- 188
ಬೆಳಗಾವಿ :ಜೈನ ಸಮುದಾಯದ ಪವಿತ್ರ ಸ್ಥಳ ಸಮ್ಮೇದ ಶಿಖರವನ್ನು ಪ್ರವಾಸಿ ಸ್ಥಳವಾಗಿ ಮಾರ್ಪಡಿಸುವ ಕೇಂದ್ರ ಸರಕಾರದ ಯತ್ನವನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಜೈನ ಧರ್ಮಿಯರು ಬೃಹತ್ ಪ್ರತಿಭಟನೆ ನಡೆಸಿದರು.

ಜೈನ ಸಮಾಜದ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ, ಜೈನರ ಆತ್ಮಾಭಿಮಾನ ಪವಿತ್ರ ಸ್ಥಳ ಸಮ್ಮೇದ್ ಶಿಖರಜೀ ಆಗಿದ್ದು ಆ ಸ್ಥಳವನ್ನು ಸ್ವಾಭಾವಿಕ ಪರಿಶುದ್ಧತೆಯಲ್ಲಿ ಇರಲು ಸುಮ್ಮನೆ ಬಿಟ್ಟು ಬಿಡಬೇಕು. ಕೇಂದ್ರ ಮತ್ತು ಝಾರ್ಖಂಡ್ ರಾಜ್ಯ ಸರ್ಕಾರಗಳು ಯಾವುದೇ ಕಾರಣಕ್ಕೂ ಜೈನರ ಶಿಖರ್ಜಿ ಮೇಲೆ ಆಡಳಿತ ಮಾಡಲು ಹೋಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಂಜಯ ಪಾಟೀಲ್ ಧರ್ಮದ 20 ತೀರ್ಥಂಕರರು ಹಾಗೂ 20ಕೋಟಿ ಜನ ಜೈನರು ಇಲ್ಲಿ ಮೋಕ್ಷ ಪಡೆದಿರುವ ಪವಿತ್ರ ಸ್ಥಳ ಸಮ್ಮೇದ್ ಶಿಖರವಾಗಿದೆ. ಜೈನರಿಗೆ ಹಣಕಾಸಿನ ಕೊರತೆ ಇಲ್ಲ. ಜೈನರ ಪವಿತ್ರ ಸ್ಥಳವನ್ನು ಸರಕಾರ ಅಭಿವೃದ್ಧಿ ಮಾಡುವ ಅವಶ್ಯಕತೆಯೂ ನಮಗೆ ಬೇಕಾಗಿಲ್ಲ ಎಂದು ಕಿವಿಮಾತು ಹೇಳಿದರು.










