ಎನ್ಎಸ್ ಯುಐ ಘಟಕದಿಂದಯಿಂದ ಕಾಲೇಜ್ ಬಂದ ಪ್ರತಿಭಟನೆ
- 15 Jan 2024 , 2:42 AM
- Belagavi
- 185
ಬೆಳಗಾವಿ: ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಎನ್ ಎಸ್ ಯು ಐ ಬೆಳಗಾವಿಯ ಘಟಕ ತಮ್ಮ ಬೇಡಿಕೆಗಾಗಿ ಪ್ರತಿಭಟನೆ ನಡೆಸುವ ಮಾಹಿತಿ ನೀಡಿತು.

ಇದೆ ಡಿಸೆಂಬರ್ 17 ರಂದು ಭಾರತ ರಾಷ್ಟ್ರೀಯ ವಿಧ್ಯಾರ್ಥಿ ಒಕ್ಕೂಟ ಬೆಳಗಾವಿ ಘಟಕ ನಗರ ಹಾಗೂ ರಾಜ್ಯದ ಎಲ್ಲಾ ಕಡೆಗಳಲ್ಲಿ ಕಾಲೇಜುಗಳನ್ನು ಬಂದ ಮಾಡಿಸುವ ಮೂಲಕ ಸರ್ಕಾರದ ವಿರುದ್ಧ ತನ್ನ ಪ್ರತಿಭಟನೆ ಮಾಡುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಧೋರಣೆಗಳಿಂದ ವಿದ್ಯಾರ್ಥಿ ಸಮೂಹ ಹಲವಾರು ಸಮಸ್ಯೆ ತೊಂದರೆಗಳನ್ನು ಅನುಭವಿಸುತ್ತಿದ್ದು, ಅವೆಲ್ಲವುಗಳ ನಿವಾರಣೆಗಾಗಿ ಹಾಗೂ ವಿದ್ಯಾರ್ಥಿಗಳ ಹಲವು ಬೇಡಿಕೆಗಾಗಿ ಕಾಲೇಜ್ ಬಂದ ಮಾಡುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು ತಮ್ಮ ವಿಚಾರಗಳನ್ನು ವಿವರವಾಗಿ ಮಾಧ್ಯಮಗಳೊಂದಿಗೆ ಹಂಚಿಕೊಂಡರು.
NSUI ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಅಧ್ಯಕ್ಷರಾದ ಭರಮು ಕುರ್ಲಿ, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರು ಸಂಗನಗೌಡ ಪಾಟೀಲ್ , ವಿದ್ಯಾರ್ಥಿ ಯುವ ಮುಖಂಡರಾದ ಬಸು ನಾಯಕ ಉಪಸ್ಥಿತರಿದ್ದರು.










