ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೇ ಸೌಲಭ್ಯಗಳಿಗಾಗಿ ಪ್ರತಿಭಟನೆ
- 15 Jan 2024 , 1:18 AM
- Belagavi
- 206
ಬೆಳಗಾವಿ :ಕರ್ನಾಟಕ ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶಗಳ ರೈತರ ಕೃಷಿ ಕಾರ್ಮಿಕರ ಬಡಕುಟುಂಬಗಳ ಆರ್ಥಿಕ ನೆರವು, ಪಡಿತರ, ಕೃಷಿ ಪರಿಕರಗಳನ್ನು ಹಾಗೂ ಸರಕಾರದಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನು ತಲುಪಿಸುತ್ತಿದ್ದು, ಈ ಸಂಘಗಳು ಸ್ಥಾಪನೆಯಾಗಿ 118 ವರ್ಷಗಳು ಕಳೆದಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಸಂಘಗಳ ಮೂಲಕ ರೈತರ ಸೇವೆ ಮಾಡುತ್ತಿರುವ ನೌಕರರುಗಳಿಗೆ ಈವರೆಗೂ ಯಾವುದೇ ರೀತಿಯ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೇ ಸೌಲಭ್ಯಗಳು ದೊರೆತಿಲ್ಲ. ಈ ಬಗ್ಗೆ ಕಳೆದ 30 ವರ್ಷಗಳಿಂದಲೂ ಸಂಘಟನೆಗಳ ಮೂಲಕ ನೌಕರರ ಬೇಡಿಕೆ ಈಡೇರಿಸಿಕೊಳ್ಳಲು ಹೋರಾಟ ಮಾಡುತ್ತಿದ್ದು, ಇದುವರೆಗೂ ಯಾವದೇ ಸರ್ಕಾರಗಳು ಈ ಬಗ್ಗೆ ಅನುಕಂಪ ತೋರಿಸಿ ಜಾರಿಗೆ ತರಲಿಲ್ಲ.

ದಿನಾಂಕ-02-12-2016 ರಂದು ಬೆಳಗಾವಿ ಸುವರ್ಣಾಸೌಧದ ಎದುರು ನೌಕರರು ಬೃಹತ ಧರಣೆಯನ್ನು ನಡೆಸಿ ಆಗಿನ ಸಹಕಾರ ಸಚಿವರಾದ ದಿ|| ಎಚ್ ಎಸ್ ಮಹದೇವ್ ಪ್ರಸಾದ್ ರವರಿಗೆ ನೌಕರರ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ -ಬ್ಯಾಂಕಗಳ ಕ್ಷೇಮಾಭಿವೃದ್ಧಿ ಮಹಾಮಂಡಳ (ರಿ) ಬೆಂಗಳೂರು ಇದರ ಮೂಲಕ ಮನವಿ ಸಲ್ಲಿಸಲಾಗಿತ್ತು.
ಮಾನ್ಯ ಸಚಿವರು ಇದಕ್ಕೆ ಸ್ಪಂದಿಸಿ ಬೇಡಿಕೆ ಈಡೇರಿಸಿಕೊಡುವ ಬಗ್ಗೆ ಸಹಕಾರ ಇಲಾಖೆಯ ವರದಿ ಪಡೆದು ಜಾರಿಗೆ ತರಲು ಕ್ರಮ ತೆಗೆದುಕೊಳ್ಳಬೇಕೆಂಬ ಸೂಚನೆಯಂತೆ ಸಹಕಾರ ಇಲಾಖೆಯ ಕಾರ್ಯದರ್ಶಿಗಳು ದಿನಾಂಕ 11-01-2017 ರಂದು ಕ್ಷೇಮಾಭಿವೃದ್ಧಿ ಮಹಾಮಂಡಳ ಮತ್ತು ಇಲಾಖೆ ಅಧಿಕಾರಿಗಳ ಜಂಟಿ ಸಭೆ ನಡೆಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವರ್ಗದ ನೌಕರರ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೇ ಸೌಲಭ್ಯಗಳನ್ನು ನೀಡಲು ಅಧ್ಯಯನ ಸಮಿತಿಯನ್ನು ರಚಿಸಿ ವರದಿ ಪಡೆಯುವಂತೆ ಸಹಕಾರ ಸಂಘಗಳ ನಿಬಂಧಕರಿಗೆ ಸೂಚಿಸಿದ ಹಿನ್ನಲೆ ಮಾನ್ಯ ನಿಬಂಧಕರು ದಿನಾಂಕ-28-01-2017 ರಂದು ಸಮಿತಿ ರಚಿಸಿ ಆದೇಶ ಹೊರಡಿಸಿ ಚಾಲನೆ ನೀಡಿದ್ದರ ಮೇರೆಗ ಸಮಿತಿಯವರು ಸಭೆಯನ್ನು ನಡೆಸಿ ನಮ್ಮ ರಾಜ್ಯದಲ್ಲಿನ ಮತ್ತು ಪಕ್ಕದ ರಾಜ್ಯ ಕೇರಳಕ್ಕೆ ಹೋಗಿ ಅಲ್ಲಿನ ಸಂಘಗಳ ನೌಕರರಿಗೆ ಸರಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಅಧ್ಯಯನ ಮಾಡಿ ಬಂದು ದಿನಾಂಕ-31-10-2017 ರಂದು ಸರ್ಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಿದ್ದು, ಈ ಹಿಂದೆ ಸಹಕಾರ ಸಚಿವರಾಗಿದ್ದ, ರಮೇಶ ಜಾರಕಿಹೊಳಿ ಅವರ ಖಡಕ್ ಸೂಚನೆಯಂತೆ ನೌಕರರ ಬೇಡಿಕೆಗಳನ್ನು ಜಾರಿಗೆ ತರಲು ವರದಿಯಲ್ಲಿ ಸೂಚನೆ ನೀಡಿರುವಂತೆ ಸಹಕಾರ ಕಾಯ್ದೆ 1959 ಕ್ಕೆ ತಿದ್ದುಪಡಿ ತಂದು ಕಾಯ್ದೆ 98ಇಎ 98ಇಬಿ ಮತ್ತು 98ಇಸಿ ಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರಿಗಾಗಿ ಹೊಸದಾಗಿ ಸೇರ್ಪಡೆ ಮಾಡಲು ಪ್ರಸ್ತಾವನೆ ಸಲ್ಲಿಸಲು ಅಧಿಕಾರಗಳ ಸೂಚಿಸಿದರ ಮೇರೆಗೆ ದಿನಾಂಕ-22-02-2018 ರಂದು ಸಹಕಾರ ಸಂಘಗಳ ನಿಬಂಧಕರು, ಹಾಗೂ ಸಮಿತಿ ಅಧ್ಯಕ್ಷರು, ಸಮಿತಿಯ ಸದಸ್ಯರು ಮತ್ತು ಕ.ರಾ.ಪ್ರಾ.ಕೃ.ಪ.ಸ.ಸಂ ಕ್ಷೇಮಾಭಿವೃದ್ಧಿ ಮಹಾಮಂಡಳದ ಪದಾಧಿಕಾರಿಗಳೊಡನೆ ಜಂಟಿ ಸಭೆ ನಡೆಸಿ ಸೂಕ್ತ ತಿದ್ದುಪಡಿ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಿದ್ದರು. ಅಧಿಕಾರಿಗಳು ಮಾಡಿದ ತಪ್ಪಿನಿಂದ ಹಾಗೂ ಅಧಿವೇಶನ ಮೊಟಕಾಗಿದ್ದರಿಂದ ಈ ಕಾಯ್ದೆ ಮಂಡನೆಯಾಗಲಿಲ್ಲ.

ಈಗಿನ ಸಹಕಾರ ಸಚಿವರಾದ ಮಾನ್ಯ ಶ್ರೀ ಎಸ್.ಟಿ. ಸೋಮಶೇಖರ ರವರನ್ನು ನಮ್ಮ ಕ್ಷೇಮಾಭಿವೃದ್ಧಿ ಮಹಾಮಂಡಳದ ಪದಾಧಿಕಾರಿಗಳು ದಿನಾಂಕ : 03-10-2021, 08-12-2021, 20-12-2021, 10-07-2022 ಮತ್ತು 06-09-2022 ರಂದು ಭೇಟಿಯಾಗಿ ನೌಕರರ ಬೇಡಿಕೆಯ ಬಗ್ಗೆ ಈವರೆಗೆ ಆಗಿರುವ ಪ್ರಗತಿಯನ್ನು ವಿವರಿಸಿ ತಮ್ಮ ಅವಧಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ನೌಕರರ ಬೇಡಿಕೆ ಜಾರಿಗೊಳಿಸಿ ಕೊಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಸಚಿವರು ಈ ಬಗ್ಗೆ ಕ್ರಮ ಕೈಕೊಂಡು ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದರು.
ಈವರೆಗೆ ಅನೇಕ ಸಲ ಮಾನ್ಯ ಸಹಕಾರ ಸಚಿವರು ಇಲಾಖೆಯ ಕಾರ್ಯದರ್ಶಿಗಳು ನಿಬಂಧಕರುಗಳನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇಮಾಭಿವೃದ್ಧಿ ಮಹಾಮಂಡಳದ ಪದಾಧಿಕಾರಿಗಳು ಭೇಟಿಯಾಗಿ ಒತ್ತಾಯಿಸಿದ್ದರು. ನೌಕರರ ಬೇಡಿಕೆಯ ಈಡೇರಿಕೆಗೆ ಸಮಿತಿ ಸೂಚಿಸಿರುವ ಕಾಯ್ದೆಗೆ ತಿದ್ದುಪಡಿಯನ್ನು ಬರುವ ವಿಧಾನ ಸಭೆಯಲ್ಲಿ ಮಂಡಿಸಿ ಜಾರಿಗೆ ಕೊಡಲು ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದು ಅಲ್ಲದೆ ಸಹಕಾರ ಇಲಾಖೆಯ ಅಧಿಕಾರಿಗಳಿಗೂ ಸಹ ಮತ್ತೆ ದಿನಾಂಕ-21-11-2022 ರಂದು ಕಾಯ್ದೆ ಜಾರಿಗೆ ತರಲು ಕ್ರಮಕೈಗೊಳ್ಳಬೇಕೆಂದು ಪತ್ರ ಸಲ್ಲಿಸಿದ್ದರೂ ಈವರೆಗೆ ಯಾರಿಂದಲೂ ಸಕಾರಾತ್ಮಕವಾದ ಉತ್ತರ ಬಂದಿಲ್ಲ.
ಇದನ್ನು ಮನಗೊಂಡು ಪದಾಧಿಕಾರಗಳು ದಿನಾಂಕ-20-11-2022 ರಂದು ಮಹಾಮಂಡಳದ ತಾಲ್ಲೂಕಾ, ಜಿಲ್ಲಾ ಹಾಗೂ ರಾಜ್ಯ ಸಂಚಾಲಕರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿ ವಿಷಯಗಳನ್ನು ಸಭೆಯ ಮುಂದೆ ಮಂಡಿಸಲಾಗಿ ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ನೌಕರರುಗಳು ಸಂಘದ ಕೆಲಸಗಳನ್ನು ಹಗಲಿರುಳೆನ್ನೇದೆ ಸಾಲ-ಮನ್ನಾ ಕಾರ್ಯಕ್ರಮದ ಮಾಹಿತಿಗಳನ್ನು ಪೂರೈಸಿಸುತ್ತಿದರು. ಹಾಗೂ ಯಾವ ಸೇವಾ ಸೌಲಭ್ಯಗಳಿಲ್ಲದೇ ದುಡಿಯುತ್ತಿದ್ದರೂ ಸಹ ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಕೆಗೆ ಮತ್ತು ನೌಕರರ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿದ್ದು ಈ ನೌಕರರ ಮುಖಾಂತರ ಬಡ್ಡಿ ರಹಿತ ಬೆಳೆಸಾಲದಂತಹ ಮುಂತಾದ ಯೋಜನೆಗಳನ್ನು ರೈತರಿಗೆ ನೇರವಾಗಿ ತಲುಪಿಸಲು ಕಾರಣಿಭೂತರಾಗಿರುತ್ತಾರೆಂಬುದನ್ನು ಸರಕಾರ ಅರಿಯಬೇಕಾಗಿರುತ್ತದೆ ಅಲ್ಲದೇ ಸಹಕಾರ ಇಲಾಖೆಯ ಪ್ರಧಾನ ಕಾರ್ಯದಶಿಗಳು ರಚಿಸಿದ್ದ ಸಮಿತಿ ನೌಕರರ ಬೇಡಿಕೆಯ ಬಗ್ಗೆ ಸರಕಾರಕ್ಕೆ ದಿನಾಂಕ 31-10- 2017 ರಂದು ವರದಿ ನೀಡಿದ್ದರು. ಈಗಿನ ಮಾನ್ಯ ಸಹಕಾರ ಸಚಿವರು ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಂಡಿರುವುದಿಲ್ಲಾ.
ಆದುದ್ದರಿಂದ ಸರಕಾರದ ಉದಾಸೀನತೆಯ ವಿರುದ್ಧ ಈಗಾಗಲೇ ರಾಜ್ಯದ ಪ್ರತಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರವರಿಗೆ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಸಂಘದ ನೌಕರರು ಜಾಥಾ ಮೂಲಕ ಬೇಡಿಕೆ ಈಡೇರಿಕೆಗಾಗಿ ಮನವಿಯನ್ನು ಸರಕಾರಕ್ಕೆ ಸಲ್ಲಿಸುವುದ ಸಹ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಂಡಿರುವುದಿಲ್ಲಾ. ಇದನ್ನು ಮನಗೊಂಡ ವೃದ್ಧಿ ಮಹಾಮಂಡಳವು ದಿನಾಂಕ-20-11-2022ರ ಸಂಚಾಲಕರುಗಳ ಸಭೆಯ ತೀರ್ಮಾನದಂತೆ ದಿನಾಂಕ- 26-12-2022ರ ಸೋಮವಾರ ಬೆಳಿಗ್ಗೆ 9 ಘಂಟೆಯಿಂದ ಬೆಳಗಾವಿ ಸುವರ್ಣ ಸೌಧದ ಎದುರು ಟೆಂಟ್ ನಂ-8 ರಲ್ಲಿ ಬೃಹತ ಧರಣಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ತಾವು ಕರ್ನಾಟಕ ಸರಕಾರದ ಸಹಕಾರ ಸಚಿವರಾಗಿದ್ದು ಈ ನೌಕರರ ಬೇಡಿಕೆಯನ್ನು ಮತ್ತು ಸಂಘಗಳ ಬೇಡಿಕೆಯನ್ನು ಗಂಭಿರವಾಗಿ ಪರಿಗಣಿಸಿ ನಡೆಯುತ್ತಿರುವ ನೌಕರರಗಾಗಿ ರಾಜ್ಯ ಮಟ್ಟದ ಪ್ರಾದಿಕಾರವನ್ನು ರಚಿಸುವಂತಹ ಕಾಯ್ದೆಯನ್ನು ಈ ಕೂಡಲೇ ಜಾರಿಗೆ ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ.
ತಾವು ಸಂಘಗಳ ಅಧ್ಯಕ್ಷರು ಮತ್ತು ನೌಕರರ ಮುಷ್ಕರದ ವೇದಿಕೆಗೆ ಬಂದು ಸಂಘದ ಮತ್ತು ನೌಕರರ ಬೇಡಿಕೆಗಳನ್ನು ಆಲಿಸಿದಕ್ಕಾಗಿ ದನ್ಯವಾದಗಳು ಮತ್ತು ಈ ಬೇಡಿಕೆಗಳನ್ನು ಕೂಡಲೇ ಜಾರಿಗೆ ತರುತ್ತಿರೆಂದು ಈ ಕ್ಷೇಮಾಭಿವೃದ್ಧಿ ಮಹಾಮಂಡಳವು ಆಶಿಸುತ್ತದೆ.










