ರಾಮಗಿರಿ‌ ಮಹಾರಾಜರ ಹೇಳಿಕೆ ಖಂಡಿಸಿ, ಚಿಕ್ಕೋಡಿಯಲ್ಲಿ ಪ್ರತಿಭಟನೆ

ಚಿಕ್ಕೋಡಿ : ಮೊಹಮ್ಮದ್ ಪೈಗಂಬರ್ ವಿಚಾರದಲ್ಲಿ ರಾಮಗಿರಿ ಮಹಾರಾಜರ ಹೇಳಿಕೆ  ಖಂಡಿಸಿ, ಚಿಕ್ಕೋಡಿಯಲ್ಲಿ ಮುಸ್ಲಿಂ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. 

promotions

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಬೃಹತ್  ಮೆರವಣಿಗೆ ನಡಿಸಿ, ಭಾಗವಹಿಸಿ ರಾಮಗಿರಿ ಮಹಾರಾಜರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

promotions

ಕೂಡಲೇ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರಲ್ಲದೆ, ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. 

ವಾಹನಗಳಿಗೆ ಅಡ್ಡಗಟ್ಟುತ್ತಿದ್ದ ಪ್ರತಿಭಟನಾಕಾರರಿಗೆ  ಪೊಲೀಸರಿಂದ ತಡೆಗಟ್ಟಿದ ಹಿನ್ನಲೆಯಲ್ಲಿ  ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ಪ್ರತಿಭಟನಾಕಾರರು.

Read More Articles