ರಾಹುಲ ಗಾಂಧಿ ಹಿಂದೂಗಳ ಕ್ಷಮೆ ಕೋರುವವರೆಗೂ ಪ್ರತಿಭಟನೆ! ಅನಿಲ ಬೆನಕೆ

ಬೆಳಗಾವಿ : ಚುನಾವಣೆ ಬಂದಾಗ ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡಿ, ನಾಟಕ ಮಾಡುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಈ ಕೂಡಲೇ ಕ್ಷಮೆ ಕೇಳಬೇಕೆಂದು ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಆಗ್ರಹಿಸಿದರು. 

promotions

ಬೆಳಗಾವಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣಾ ಸಂದರ್ಭಗಳಲ್ಲಿ ದೇವಸ್ಥಾನಗಳಿಗೆ ಹೋಗಿ ಆಶೀರ್ವಾದ ಪಡೆದು ಈಗ ಹಿಂದೂಗಳಿಗೆ ಬೈಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಳೆದ ಸಾವಿರಾರು ವರ್ಷಗಳಿಂದ ಹಿಂದೂಗಳನ್ನ ಓಡಿಸಲು ಸಾಕಷ್ಟು ಪ್ರಯತ್ನಗಳು ನಡೆದಿವೆ ಎಂದರು. 

promotions

ದೇಶದಲ್ಲಿನ ಹಿಂದೂಗಳು ಅಹಿಂಸಾವಾದಿಗಳು. ಅವರನ್ನು ಓಡಿಸಲು ಸಾವಿರಾರು ವರ್ಷದಿಂದ ಪ್ರಯತ್ನ ನಡೆಸಿ ವಿಫಲರಾದ ಸಾಕಷ್ಟು ಜನರಿದ್ದಾರೆ 

ಅದೇ ವಿಫಲ ಪ್ರಯತ್ನವನ್ನು ಈಗ ರಾಹುಲ್ ಗಾಂಧಿ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು. 

ಹಿಂದೂಗಳ‌ನ್ನ ಬೈದರೆ ಎಲ್ಲರೂ ಜತೆಗೆ ಬರ್ತಾರೆ ಅನ್ನುವ ಭ್ರಮೆಯಲ್ಲಿರುವ ರಾಹುಲ್ ಗಾಂಧಿಯ ಪ್ರಯತ್ನ ಫಲ ಕೊಡುವುದಿಲ್ಲ ಅವರು ದೇಶದ ಜನರ ಕ್ಷಮೆ ಕೇಳುವವರೆಗೂ ಬಿಜೆಪಿ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Read More Articles