ದುಡಿಯುವ ಜನರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
- shivaraj B
- 31 Jul 2024 , 5:53 PM
- Belagavi
- 2774
ಬೆಳಗಾವಿ : ದೇಶ ಬೆಳೆಯುತ್ತಿದೆ; ರಾಜ್ಯವೂ ಅಭಿವೃದ್ಧಿಯನ್ನು ಮುನ್ನಡೆಯುತ್ತಿವೆ; ಹಾಗೆಯೇ ನಮ್ಮ ಅಂಗನವಾಡಿಗಳು ಕೂಡ ಉನ್ನಿತೀಕರಣ ಆಗಬೇಕೆಂಬ ಆಶಯದಿಂದ ನಮ್ಮ ಇಲಾಖೆ, ಅಂಗನವಾಡಿಗಳನ್ನುಆಧುನೀಕರಣಗೊಳಿಸುತ್ತಿದೆ.

ಇದು ಪೈಪೋಟಿ ಯುಗ, ಆಧುನಿಕ ತಂತ್ರಜ್ಜಾನ ಯುಗ; ಹಾಗಾಗಿ, ಇಂತಹ ಯುಗದಲ್ಲಿ, ಬಿಡುವಿಲ್ಲದೆ ದುಡಿಯುವ ಜನರ ಮಕ್ಕಳು, ರೈತರ ಮಕ್ಕಳು ಕೂಡ ನರ್ಸರಿ ಕಲಿಯಬೇಕೆಂದು ಆಶಯದಿಂದ ಸರ್ಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗಿದೆ. ಇಂಗ್ಲೀಷ್ ಮತ್ತು ಕನ್ನಡದಲ್ಲಿ ಮಕ್ಕಳಿಗೆ ಕಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.











