ರಸ್ತೆ ಕಾಮಗಾರಿ ಗುಣಮಟ್ಟವನ್ನು ಪರೀಕ್ಷಿಸಿದ : ಶಾಸಕ ಗಾಲಿ ಜನಾರ್ದನ ರೆಡ್ಡಿ

ಗಂಗಾವತಿ : ನಗರದ ಮಹಾರಾಣಾ ಪ್ರತಾಪ್‌ ವೃತ್ತದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸೋಮವಾರದಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

promotions

ಗಂಗಾವತಿ ನಗರದ ಮಹಾರಾಣಾ ಪ್ರತಾಪ್‌ ವೃತ್ತದಿಂದ ಸಿ ಬಿ ಎಸ್ ವೃತ್ತದವರೆಗೂ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಒಂದು ಕಾಮಗಾರಿ ಸ್ಥಳಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಭೇಟಿ ನೀಡಿ ವೀಕ್ಷಣೆ ಮಾಡಿ ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

promotions

ಮಹಾರಾಣಾ ಪ್ರತಾಪ್‌ ವೃತ್ತದಲ್ಲಿ ಅವೈಜ್ಞಾನಿಕ ವಾಗಿ ರಸ್ತೆ ವಿಭಾಜಕ ನಿರ್ಮಾಣ ಮಾಡಲಾಗಿದ್ದು, ಇದರಿಂದ ರಾತ್ರಿ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತ ಸಂಭವಿಸುತ್ತಿವೆ. ಅಪಘಾತ ತಡೆಗಟ್ಟಲು ರಸ್ತೆ ವಿಭಾಜಕ ತೆರವು ಗೊಳಿಸುವ ಅಗತ್ಯ ಇದ್ದು, ರಸ್ತೆ ವಿಭಾಜಕ ತೆರವು ಗೊಳಿಸುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸೂಚಿಸಿದರು.

ನಂತರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿ ವೀಕ್ಷಿಸಿ, ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ತಿಳಿಸಿ, ಶೀಘ್ರವೇ ಸಾರ್ವಜನಿಕರು ಸಂಚರಿಸಲು ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರ ಆಯುಕ್ತ ಆರ್ ವಿರುಪಾಕ್ಷಿಮೂರ್ತಿ, ನಗರಸಭೆ ಅಧಿಕಾರಿಗಳು ಹಾಗೂ ಕೆ ಆರ್ ಪಿ ಪಕ್ಷದ ಮುಖಂಡರುಗಳಾದ ಮನೋಹರ ಗೌಡ ಹೇರೂರು, ವೀರೇಶ್ ಬಲಕುಂದಿ, ರಾಜೇಶ್ ರೆಡ್ಡಿ, ಯಮನೂರು ಚೌಡಕಿ, ಬಾಷಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read More Articles