ಸರ್ಕಾರಿ ಬಂಗಲೆ ಖಾಲಿ ಮಾಡುವ ಮುಂಚೆ ಲೋಕಸಭಾ ಸಚಿವಾಲಯಕ್ಕೆ ಪತ್ರ ಬರೆದ ರಾಹುಲ್ ಗಾಂಧಿ

ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್‌ನ ಸ್ಥಳೀಯ ನ್ಯಾಯಾಲಯವು ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸಿದ ನಂತರ ಲೋಕಸಭೆ ಸೆಕ್ರೆಟರಿಯೇಟ್ ಮಾರ್ಚ್ 24 ರಂದು ಗಾಂಧಿ ಅವರನ್ನು ಅನರ್ಹಗೊಳಿಸಿದ ಕಾರಣ ಏಪ್ರಿಲ್ 22 ರೊಳಗೆ 12 ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭೆಯ ವಸತಿ ಸಮಿತಿಯಿಂದ ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರಿಗೆ  ಪತ್ರ ಕಳುಹಿಸಲಾಗಿತ್ತು

promotions

ಕಳೆದ 4 ಅವಧಿಗಳಲ್ಲಿ ಲೋಕಸಭೆಗೆ ಚುನಾಯಿತ ಸದಸ್ಯನಾಗಿ, ನಾನು ಇಲ್ಲಿ ಕಳೆದ ಸಮಯದ ಸಂತೋಷದ ನೆನಪುಗಳಿಗೆ ನಾನು ಋಣಿಯಾಗಿರುತ್ತೇನೆ ಎಂದು ರಾಹುಲ ಗಾಂಧಿ ಹೇಳಿದ್ದಾರೆ.

promotions

ನನ್ನ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ, ನಾನು ಖಂಡಿತವಾಗಿಯೂ ನಿಮ್ಮ ಪತ್ರದಲ್ಲಿರುವ ವಿವರಗಳಿಗೆ ಬದ್ಧನಾಗಿರುತ್ತೇನೆ, ”ಎಂದು ರಾಹುಲ್ ಗಾಂಧಿ ಅವರು ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್‌ನ ಕುರಿತು ಲೋಕಸಭೆ ಸೆಕ್ರೆಟರಿಯಟ್ ಎಂಎಸ್ ಶಾಖೆಯ ಉಪ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

Read More Articles