ನದಿಪಾತ್ರದ ಜಮೀನುಗಳಿಗೆ ನುಗ್ಗಿದ ಮಳೆ ನೀರು. ಪ್ರವಾಹ ಬೀತಿ ಇದ್ದರೂ ನಿದ್ರೆಯಲ್ಲಿದೆ ಜಿಲ್ಲಾಡಳಿತ

ಚಿಕ್ಕೋಡಿ : ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವದರಿಂದ ಅಂದಾಜು 65 ಸಾವಿರ ಕ್ಯೂಸೇಕ್ಸ್ ನೀರಿನ ಒಳಹರಿವು ಇದ್ದು, 

promotions

ನದಿ ಪಾತ್ರದ ಜನರಲ್ಲಿ ಪ್ರವಾಹ ಉಂಟಾಗುವ ಭೀತಿಯುಂಟಾಗಿದೆ. ಅಲ್ಲದೆ ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಕಬ್ಬು ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

promotions

ಪ್ರವಾಹ ಭೀತಿ ಎದುರಿಸುತ್ತಿದ್ದರೂ, ಬೆಳಗಾವಿ ಜಿಲ್ಲಾಡಳಿತ ನಿದ್ರೆಯಿಂದ ಎಚ್ಚೆತ್ತುಕೊಂಡಿಲ್ಲ. 

ನದಿ ಪಾತ್ರದ ಬಳಿ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಹಾಗೂ ಸೂಚನಾ ಫಲಕ ಅಳವಡಿಸದ ಬೆಳಗಾವಿ ಪೊಲೀಸರು.

ಇಲ್ಲಿಯವರೆಗೂ ಒಂದೇ ಒಂದು ಕಾಳಜಿ ಕೇಂದ್ರ ತೆರೆದಿಲ್ಲ. ಜಿಲ್ಲಾಡಳಿತದಿಂದ ಪ್ರವಾಹ ಎದುರಿಸುವ ಸ್ಥಳಗಳಿಗೆ ಭೇಟಿ ಸಹ ಮಾಡಿಲ್ಲ.

ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸದೇ ಇದ್ದಲ್ಲಿ ಅಪಾರ ಪ್ರಮಾಣದ ಹಾನಿಯಾಗುವ ಸಾಧ್ಯತೆ ಇದ್ದು, 

Read More Articles