ತಮ್ಮ ಬೇಡಿಕೆ ಈಡೇರಿಸುವ ಪಕ್ಷಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ ರೈತ ಸಂಘ

ಮುಂಬರುವ ಕರ್ನಾಟಕ ಎಲೆಕ್ಷನ್ 2023 ಸಲುವಾಗಿ ರೈತರ ಚುನಾವಣಾ ಪ್ರಣಾಳಿಕೆ  ಪ್ರಕಟಿಸಿದ ರೈತ ಸಂಘ ತಮ್ಮ್ ಬೇಡಿಕೆ ಈಡೇರಿಸುವ ಪಕ್ಷಗಳಿಗೆ ತಮ್ಮ್ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

promotions


ರೈತರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಬೇಡಿಕೆಗಳು ಈ ಕೆಳಗಿನಂತಿವೆ 

promotions

ರೈತರಿಗೆ ಕನಿಷ್ಠ ಅದಾಯ ಖಾತರಿ ಒದಗಿಸಬೇಕು.

ಹಗಲು ವೇಳೆಯಲ್ಲಿ ಕೃಷಿ ಪಂಪಸೆಟ್‌ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್‌ ನೀಡುವ ಭರವಸೆ ಬೇಕು.

ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಅಗಬೇಕು ಕೃಷಿ ಸಾಲ ನೀತಿ  ಬದಲಾಗಬೇಕು. 

ದೇಶದ ಜನರ ಆಹಾರ  ಉತ್ಪಾದನೆ ಮಾಡುವ ರೈತನಿಗೆ ಕೃಷಿ ಸಾಲ ಬಡ್ಡಿ ರಹಿತವಾಗಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀಡುವಂತೆ  ಯೋಜನೆ ಜಾರಿಗೆ  ಬರಬೇಕು.

ಕೃಷಿ ಸಾಲಕ್ಕೆ ಸಿಬಿಲ್  ಸ್ಕೋರ್  ಪರಿಗಣನೆ ಕೈ ಬಿಡುವುದಾಗಿ  ಭರವಸೆ ನೀಡಬೇಕು.

ಎಲ್ಲಾ ಕೃಷಿ ಉತ್ತನ್ನಗಳಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಶಾಸನ ಜಾರಿ ಮಾಡುವ ಭರವಸೆ ನೀಡಬೇಕು

ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯಂತೆ  ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು.

ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿ ಮಾಡಬೇಕು, ಎಲ್ಲಾ ಬೆಳೆಗಳಗೂ ಅನ್ವಯ ಮಾಡಬೇಕು.

ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಸಬೇಕು, ಅಗತ್ಯ ಸಂದರ್ಭಗಳಲ್ಲಿ ರೈತರ ಅನುಮತಿ ಪಡೆಯಬೇಕು ಇಂತಹ ರೈತರಿಗೆ ಜೀವನ ಭದ್ರತೆ ರೂಪಿಸಬೇಕು.

ಕಬ್ಬಿನ  ಎಫ್ ಆರ್ ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಪಡಿಸಬೇಕು.

ರೈತರು ಅಲೆಮನೆಗಳಲ್ಲಿ ಕಬ್ಬಿನಿಂದ  ಎಥನಾಲ್  ಉತ್ಪಾದನೆಗೆ ರೈತರಿಗೆ ಅವಕಾಶ ನೀಡಬೇಕು.

ಕಬ್ಬು ಬೆಳೆಯ ಉತ್ಪಾದನೆಗೆ ಎನ್ ಆರ್ ಇ ಜಿ ಯೋಜನೆಯನ್ನು ಸೇರಿಸಬೇಕು.

ಗ್ರಾಮೀಣ ಯುವಕರನ್ನು ವಲಸೆ ತಪ್ಪಿಸಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು, ಗ್ರಾಮೀಣ ಭಾಗದಲ್ಲಿ ಕೃಷಿ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಭರವಸೆ ಬೇಕು.

ಗ್ರಾಮೀಣ ಪ್ರದೇಶಲ್ಲ್ಲಿ ವಾಸಿಸುವ ರೈತರ ಗಂಡು ಮಕ್ಕಳ ಮದುವೆಯಾಗುವ ಹೆಣ್ಣು ಮಕ್ಕಳಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ನೀಡಬೇಕು.

ಕೃಷಿ ಉತ್ಪನ್ನ ಹಾಗೂ ಕೃಷಿ ಉಪಕರಣಗಳ ಮೇಲೆ ವಿಧಿಸಿರುವ ಜಿ ಎಸ್ ಐ ರದ್ದುಗೊಳಿಸಬೇಕು : ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳಿಗೆ ಪ್ರತ್ಯೇಕ ಮಾರುಕಟ್ಟೆ, ಪ್ರತ್ಯೇಕ ಹೆಚ್ಚುವರಿ ದರ ನಿಗದಿ ಯೋಜನೆ ಜಾರಿಗೆ ಬರಬೇಕು. : ವಿದೇಶಿ ಬಹುರಾಷ್ಟ್ರೀಯ ಬಂಡವಾಳಶಾಹಿ ಕಂಪನಿಗಳು ಚಿಲ್ಲರೆ ಮಾರಾಟ ವ್ಯವಸ್ಥೆಗೆ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ನಿಷೇಧವೆರಬೇಕು.

ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕುಟುಂಬಸ್ಥರನ್ನು ಸಚಿವ ಸಂಪುಟಕ್ಕೆ ಸೇರಿಸಿ ಕೊಳ್ಳಬಾರದು.

ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವ ಭರವಸೆ ನೀಡಬೇಕು.

ರಾಜ್ಯದ ರೈತರ ಪ್ರಣಾಳಿಕೆಯನ್ನು ರಾಜ್ಯದಲ್ಲಿರುವ ಪ್ರಬಲ ಯಾವುದೇ ಪಕ್ಷ ಒಪ್ಪಿಗೆ ಸೂಚಿಸಿ ಜಾರಿಗೆ ತರಲು ಭರವಸೆ ನಿಡುತ್ತಾರೆ, ಇಂತಹ ಪಕ್ಷ ಬೆಂಬಅಸಲು ಕರೆ ನೀಡಲಾಗುವುದು.

Read More Articles