ಅನಾಥ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಇತರರಿಗೆ ಮಾದರಿಯಾದ ರಾಷ್ಟ್ರೋಸ್ಥಾನ ಶಿಕ್ಷಣ ಸಂಸ್ಥೆ

ಅಥಣಿ : ತಾಲೂಕಿನ ಅವರಕೋಡ ಗ್ರಾಮದ ರಾಷ್ಟ್ರೋಸ್ಥಾನ ಶಿಕ್ಷಣ ಸಂಸ್ಥೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತನ್ನದೆ ಹೆಜ್ಜೆಗೂರುತು ಮೂಡಿಸಿದೆ.

promotions

promotions

ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನ ತಾವು ಗುರುತಿಸಿಕೊಂಡು ಪುಟ್ಟ ಗ್ರಾಮದಲ್ಲಿ ಉನ್ನತ ಮಟ್ಟದ ಶಿಕ್ಷಣದ ಜೊತೆಗೆ ಬಡ, ಅನಾಥ, ಹಾಗೂ ವಿಶೇಷಚೇತನರಿಗೆ ಉಚಿತವಾಗಿ ಶಿಕ್ಷಣ ನೀಡಿ ಇನ್ನುಳಿದ ಶಾಲೆಗಳಿಗೆ ಮಾದರಿಯಾಗಿದೆ.

ಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಾ: ಶಿವಬಸವ ನಾಯಿಕ  ಹಾಗೂ ಶ್ರೀಮತಿ ಮಾಲತಿ ಶಿವಬಸವ ನಾಯಿಕ ಅವರ ಮಾರ್ಗದರ್ಶನದಲ್ಲಿ  ನಡೆದ ಶಾಲೆಗೆ ನಾಳೆ 25-26 ರಂದು ದಶಕದ ಸಂಭ್ರಮ ಸುಮಾರು ಎರಡು ದಿನಗಳ ಭವ್ಯ ಕಾರ್ಯಕ್ರಮದಲ್ಲಿ  ಹಲವು ಸಾಧಕರಿಗೆ ಸನ್ಮಾನ ಹಾಗೂ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ  ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗುವಂತೆ ಶ್ರೀಮತಿ ಮಾಲತಿ ನಾಯಿಕ  ಮನವಿ ಮಾಡಿದ್ದಾರೆ.

ವರದಿ : ರಾಹುಲ್ 

Read More Articles