ಗಂಡುಮೆಟ್ಟಿನ ನಾಡಲ್ಲಿ ರಾಯಣ್ಣನ ಪ್ರತಿಮೆ ಅನಾವರಣ.

ಬೈಲಹೊಂಗಲ: ಬೈಲಹೊಂಗಲ ತಾಲೂಕಿನ ಮರಡಿನಾಗಲಾಪುರ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಗ್ರಾಮದ ಎಲ್ಲ ಗುರು ಹಿರಿಯರು ಕುಂಭ ಕೊಡ ಹೊತ್ತ ಮುತ್ತೈದೆಯರು ಎಲ್ಲ ಗ್ರಾಮಸ್ಥರು,ಯುವಕರ ಸಮ್ಮುಖದಲ್ಲಿ ಅತ್ಯಂತ ಅದ್ಧುರಿಯಾಗಿ ವಿಜೃಂಭಣೆಯಿಂದ ಉದ್ಘಾಟನೆಯನ್ನು ಶ್ರೀ ಸಿದ್ದಯ್ಯ ಸ್ವಾಮಿಗಳು ಅಮೋಘಿಮಠ ಹಾಲುಮತ
ಧರ್ಮ ಗುರುಗಳಿಂದ ನೆರವೇರಿಸಲಾಯಿತು.

promotions

ಈ ಕಾರ್ಯಕ್ರಮದಲ್ಲಿ ಗ್ರಾಮದ ಯುವ ಮುಖಂಡರಾದ 
ಬಾಬು ಎಂ ಚಂದರಗಿ, ನಾಗರಾಜ್ ಬಿ ದಳವಾಯಿ, ಗಂಗಪ್ಪ ಆರ್ ವಿಭೂತಿ, ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕರಾದ ಶ್ರೀ ಮಾರುತಿ ಮರಡಿ, ಮಲ್ಲಪ್ಪ ಭೂತಾಳಿ, ನಂದಕುಮಾರ ಚಂದರಗಿ, ಮುಂತಾದವರು ಪಾಲ್ಗೊಂಡಿದ್ದರು.

promotions

Read More Articles