ಬೇಡ ಜಂಗಮ ಜಾತಿಯನ್ನು ಪರಿಶಿಷ್ಟಜಾತಿ ಪಟ್ಟಿಯಲ್ಲಿ ಸೇರಿಸದಂತೆ ಮನವಿ
- 14 Jan 2024 , 3:29 PM
- Belagavi
- 133
ಬೆಳಗಾವಿ : ಇತ್ತೀಚಿನ ದಿನಮಾನಗಳಲ್ಲಿ ಕೆಲ ಮೇಲ್ವವರ್ಗದ ಜಂಗಮರು ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ನಿರಂತರ ಹೋರಾಟ ಮಾಡುತ್ತಿದ್ದು, ಇದಕ್ಕೆ ಕೆಲವೊಂದು ಕಾನೂನಿನ ಅರಿವಿಲ್ಲದ ಕೆಲ ರಾಜಕಾರಣಿಗಳು ಈ ಜಂಗಮ ವರ್ಗದ ಜನಾಂಗಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಅಂದರೆ ಸ್ವಹಿತವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೋಟ ಬ್ಯಾಂಕ ಸಲುವಾಗಿ ದಲಿತ ವಿರೊಧಿ ಮಾನ್ಯ ಗೋವಿಂದ ಕಾರಜೋಳ ಇನ್ನೂ ಅನೇಕ ರಾಜಕಾರಣಿಗಳು ಇದಕ್ಕೆ ಬೆಂಬಲ ನೀಡುತ್ತಿದ್ದು, ಈ ರಾಜ್ಯದಲ್ಲಿ ಕೆಲವೊಂದು ಜಿಲ್ಲೆಗಳಲ್ಲಿ ಬುಡಗ ಜಂಗಮರು ಅಂತಾ ಇರುತ್ತಾರೆ, ಅವರ ಆಚಾರ, ವಿಚಾರ, ನಡೆ, ನುಡಿಗಳೇ ಬೇರೆಯಾಗಿದ್ದು ಮತ್ತು ಅವರು ಮೌಂಸಾಹಾರಿಗಳಾಗಿದ್ದಾರೆ. ಈ ಬಗ್ಗೆ ಜಂಗಮರು ಈಗಾಗಲೇ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇರುವದು ನಮ್ಮ ವಿರೋಧವಿಲ್ಲಾ, ಆರ್ಥಿಕವಾಗಿ ಸಭಲಗಿರುವ ಜಂಗಮರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಬೇಡುತ್ತಿರುವುದು ವಿಷಾದನೀಯ. ರಾಜ್ಯದಲ್ಲಿ ಹಲವಾರು ದಲಿತ ಜನಾಂಗದವರು BJ.P ಸರಕಾರಕ್ಕೆ ವೋಟು ನೀಡಿ ಅಧಿಕಾರಕ್ಕೆ ತಂದರೂ ಸಹ ಬಹು ವರ್ಷಗಳ ಬೇಡಿಕೆಯಾದ A.J. ಸದಾಶಿವ ಆಯೋಗದ ವರದಿ ಜಾರಿ ಮಾಡದೇ ಮಾದಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಅಧಿವೇಶನದಲ್ಲಿ ಮಾದಿಗರ ಪರವಾಗಿ ಧ್ವನಿ ಎತ್ತಲು ಹಿಂದೇಟು ಹಾಕುತ್ತಿದ್ದಾರೆ.

ಈ ಬೇಡ ಜಂಗಮರ ಪರ ಧ್ವನಿ ಎತ್ತುತ್ತಿರುವ ಸಚಿವ ಗೋವಿಂದ ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಈಗಿರುವ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಜಾತಿಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಜಾತಿಯನ್ನು ಪಟ್ಟಿಗೆ ಸೇರಿಸುವುದು ನಮ್ಮ ವಿರೋಧವಿದೆ ಮತ್ತು ಗೋವಿಂದ ಕಾರಜೋಳರವರು ದಲಿತ ವಿರೋಧಿ ಹೇಳಿಕೆ ಇನ್ನು ಮುಂದೆ ನೀಡಿದರೆ, ರಾಜ್ಯಾದ್ಯಾಂತ ಉಗ್ರ ಹೋರಾಟ ಮಾಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಪರವಾಗಿ ಎಚ್ಚರಿಕೆ ನೀಡುತ್ತೇವೆ ಎಂದರು .











