ಉಗಾರ ಖುರ್ದ ವಾಲ್ಮೀಕಿ ನಗರ ವಾಸಿಗಳು ರಸ್ತೆಯಿಂದ ವಂಚಿತ. ಕಂಡು ಕಾಣದ ಅಧಿಕಾರಿಗಳು
- shivaraj B
- 21 Aug 2024 , 3:50 PM
- Chikodi
- 358
ಚಿಕ್ಕೋಡಿ : ಜೀವ ಪಣಕ್ಕಿಟ್ಟು ಶಾಲೆಗೆ ತೆರಳುತ್ತಿರುವ ಉಗಾರ ಖುರ್ದಗ್ರಾಮದ ವಾಲ್ಮೀಕಿ ನಗರದ ವಿದ್ಯಾರ್ಥಿಗಳು ಈ ಶಾಲಾ ಮಕ್ಕಳ ದುಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ.

ರಸ್ತೆಯ ಮೇಲೆ ಹರಿಯುವ ನೀರಿನಲ್ಲಿ ಶಾಲೆಗೆ ತೆರಳಬೇಕಾದ ಪರಿಸ್ಥಿತಿ. ಕಾಂಗ್ರೆಸ್ ಶಾಸಕ ರಾಜು ಕಾಗೆ ತವರೂರಲ್ಲೇ ಮೂಲಭೂತ ಸೌಕರ್ಯಕ್ಕೆ ಕುತ್ತು ಇದೆ.

ಮಳೆ ಬಂದರೆ ಸಾಕು ಹಳ್ಳದಂತಾಗುವ ಈ ರಸ್ತೆಯು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿದೆ.
ಈ ಕುರಿತು ಸಾಕಷ್ಟು ಸಲ ಮನವಿ ಮಾಡಿದರೂ ಸಹ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳು ಅಧಿಕಾರಿಗಳು ರಸ್ತೆಯ ದುಸ್ಥಿತಿ ಕಂಡು ಕಾಣದಂತೆ ಕುಳಿತಿದ್ದಾರೆ.
200 ಕುಟುಂಬಗಳು ವಾಸಿಸುವ ಜನರಿಗೆ ಇಲ್ಲ ರಸ್ತೆಯ ಭಾಗ್ಯ. ರಸ್ತೆ ಮಾಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು.










