ಕೇಸರಿಮಯವಾದ ಬೈಲಹೊಂಗಲ
- Shivaraj Bandigi
- 6 Jan 2024 , 9:34 AM
- Belagavi
- 235
ಬೈಲಹೊಂಗಲ : ಪ್ರಧಾನಮಂತ್ರಿ ನರೇಂದ್ರ ಮೋದಿ ನಗರಕ್ಕೆ ಆಗಮನ ಹಿನ್ನಲೆಯಲ್ಲಿ ಪಟ್ಟಣದ ಬಹುತೇಕ ರಸ್ತೆಗಳು ಕೆಸರಿಮಯವಾಗಿ ಪರಿವರ್ತನೆಯಾಗಿವೆ.
ವಿಧಾನಸಭೆ ಪ್ರಚಾರಾರ್ಥವಾಗಿ ನಾಳೆ ಬೈಲಹೊಂಗಲ ಶಹರದ ಬೈಲವಾಡ ಕ್ರಾಸ ಬಳಿ 12 ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮತ ಭೇಟೆ ನಡೆಸಲಿದ್ದು ಈ ಪ್ರಯುಕ್ತ ಶಹರದ ಮುಖ್ಯ ರಸ್ತೆ ಸೇರಿದಂತೆ ಎಲ್ಲ ಕಡೆಗಳಲ್ಲೂ ಯಡಿಯೂರಪ್ಪ, ನಳಿನಕುಮಾರ ಕಟೀಲ ಸೇರಿದಂತೆ ಬಿಜೆಪಿ ನಾಯಕರ ಕಟೌಟಗಳು ರಾರಾಜಿಸುತ್ತಿವೆ.












