ಸುಲಿಗೆಗೆ ನಿಂತ ಸಾಣಿಕೊಪ್ಪ ಟೋಲ ಪ್ಲಾಜಾ - ದಬ್ಬಾಳಿಕೆಗೂ ಸೈ ಧಮಕಿಗೂ ಸೈ : ರವಿಕಿರಣ್ ಯಾತಗೇರಿ

ಬೈಲಹೊಂಗಲ : ಪಟ್ಟಣದಿಂದ ಕೂದಳತೆಯ ಅಂತರದಲ್ಲಿರುವ ರಾಜ್ಯ ಹೆದ್ದಾರಿಯ ಟೋಲ ಪ್ಲಾಜಾ ಲೂಟಿಗೆ ನಿಂತಿದ್ದು ವಾಹನ ಚಾಲಕರಿಂದ ದುಬಾರಿ ಟೋಲ ವಸೂಲಿ ಮಾಡುವದರ ಜೊತೆಗೆ ಧಮಕಿ ಕೂಡಾ ಹಾಕುವ ಜಾಯಮಾನಕ್ಕೆ ಇಳಿದಿರುವದು ಶೋಚನೀಯ.

promotions

ಕೆಎ 41M 7461 ವಾಹನ ರವಿವಾರ ಮದ್ಯಾಹ್ನ 2 ಗಂಟೆ 51 ನಿಮಿಷ. 45 ಸೆಕೆಂಡಿಗೆ ಬೈಲಹೊಂಗಲದಿಂದ ಬೆಳಗಾವಿಗೆ ವೈಯಕ್ತಿಕ ಕೆಲಸದ ನಿಮಿತ್ಯ ತೆರಳುವಾಗ ಹೋಗು ಬರುವ ರಸಿದಿ ಪಡೆದು ರೂ. 25 ಟೋಲದಲ್ಲಿ ಸಂದಾಯ ಮಾಡಿದ್ದರೂ ಕೂಡಾ ಕೆಲಸ ಮುಗಿಸಿ ರಾತ್ರಿ ಸುಮಾರು 11 ಗಂಟೆಗೆ ಅದೇ ಸಾಣಿಕೊಪ್ಪ ಟೋಲದ ಬಳಿ ಬಂದಾಗ ಮತ್ತೆ ಅವರ ವಾಹನದ ಫಾಸ್ಟಟ್ಯಾಗ ಮೂಲಕ ರೂ. 15 ಪಡೆದುಕೊಂಡಿದ್ದು ಇದನ್ನು ಪ್ರಶ್ನಿಸಲು ಹೋದ ವಾಹನ ಚಾಲಕನಿಗೆ ಪಾನಮತ್ತನಾಗಿ ಟೋಲದಲ್ಲಿ ಕುಳಿತ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಏನ ಆತ ಈಗ ಸುಮ್ಕ ಹೋದ್ರ ಸರಿ ಸುತ್ತಮುತ್ತ ಯಾರೂ ಇಲ್ಲ ನೋಡ ಅಂತ ಜೀವದ ಧಮಕಿ ನೀಡಿದ್ದು ಎಷ್ಟರ ಮಟ್ಟಿಗೆ ಸರಿ. ಬೈಲಹೊಂಗಲ ಶಹರದ ವ್ಯಾಪ್ತಿಯಿಂದ ಕೇವಲ ಮೂರ್ನಾಲ್ಕು ಕೀ.ಮಿ ಹದ್ದಿಯಲ್ಲಿರುವ ಟೋಲದಲ್ಲಿ ಅರಾಜಕತೆ ನಡೆಯುತ್ತಿದ್ದು ಹೇಳಕೇಳದವರು ಯಾರೂ ಇಲ್ಲದಂತಾಗಿದೆ. 

promotions

ಸರಿಯಾದ ದಾಖಲಾತಿ ಇದ್ದರೂ ಕೂಡಾ ವಾಹನ ಚಾಲಕರ ಮೇಲೆ ದಬ್ಬಾಳಿಕೆ ನಡೆಸುವ ಟೋಲ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಜರುಗಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವದು ಯಾಕೆ ಎಂಬುವದು ಯಕ್ಷ ಪ್ರಶ್ನೆಯಾಗಿ ಉಳದಿದೆ. 

ಟೋಲ ಸಿಬ್ಬಂದಿ ಹಾಗೂ ವಾಹನ ಚಾಲಕರ ನಡುವೆ ನಡೆದ ಸಂಭಾಷಣೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಹನ ಚಾಲಕ ಸೂಕ್ತ ದಾಖಲಾತಿಗಳೊಂದಿಗೆ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.

Read More Articles