ಸರಣಿ ಅಪಘಾತದಲ್ಲಿ ಸ್ಕೂಟಿ ಯುವತಿಗೆ ಗಾಯ

ಬೆಳಗಾವಿ :

promotions

ಹಿಂಬದಿಯಿಂದ ವೇಗವಾಗಿ ಬಂದ ಕಾರು ಸ್ಕೂಟಿಗೆ ಡಿಕ್ಕಿ‌ ಹೊಡೆದ ಪರಿಣಾಮ ಸ್ಕೂಟಿ ಮೇಲಿದ್ದ ಯುವತಿ 50 ಮೀಟರ್ ಹಾರಿ ಬಿದ್ದ ಘಟನೆ ಮಜಗಾವಿ, ಪೀರನವಾಡಿ ರಸ್ತೆಯ ಮಧ್ಯೆ ಮಂಗಳವಾರ ನಡೆದಿದೆ.

promotions

ವೇಗವಾಗಿ ಬಂದ ಕಾರು ಸ್ಕೂಟಿ ಜೊತೆಗೆ ಮುಂದಿದ್ದ ಮತ್ತೆರಡು ಕಾರಿಗೂ ರಭಸವಾಗಿ ಗುದ್ದಿದೆ. ಕಾರಿನ ಡಿಕ್ಕಿಯ ರಭಸಕ್ಕೆ ಸ್ಕೂಟಿ ಫೀಸ್ ಫೀಸ್ ಆಗಿದ್ದು, ಮೂರೂ ಕಾರುಗಳು ಜಖಂಗೊಂಡಿವೆ. ಸ್ಕೂಟಿ ಹಾಗೂ ಮೂರು ಕಾರುಗಳ ಸರಣಿ ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಸ್ಕೂಟಿ ಮೇಲೆ ಪ್ರಯಾಣಿಸುತ್ತಿದ್ದ ದಿವ್ಯಾ ಸುಜಯ್ ಪಾಟೀಲ (23) ಗಂಭೀರ ‌ಗಾಯವಾಗಿದೆ. ದಿವ್ಯಾ ಬೆಳಗಾವಿಯ ಬ್ರಹ್ಮನಗರದ ನಿವಾಸಿ ಎಂಬ ಮಾಹಿತಿ ತಿಳಿದು ಬಂದಿದೆ.

ಅಪಘಾತಕ್ಕೀಡಾದ ದಿವ್ಯಾ ಪಾಟೀಲನನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.ಬೆಳಗಾವಿಯ ಮಜಗಾಂವ ಕಡೆಯಿಂದ ಪೀರನವಾಡಿ ಕಡೆಗೆ ಹೊರಟಿದ್ದ ದಿವ್ಯಾ, ಈ ವೇಳೆ ಸ್ಕೂಟಿ, ಕಾರುಗಳು ಮಧ್ಯೆ ಸಂಭವಿಸಿದ ಸರಣಿ ಅಪಘಾತ ಸಂಭಂಧಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಬೆಳಗಾವಿ ‌ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More Articles