ಅಂಕಲಗಿ, ಅಕ್ಕತಂಗೇರಹಾಳ ಗ್ರಾಮ ಬೇರ್ಪಡಿಸಿ
- shivaraj bandigi
- 15 Jan 2024 , 9:19 AM
- Belagavi
- 1150
ಬೆಳಗಾವಿ :

ಗೋಕಾಕ ತಾಲೂಕಿನ ಅಂಕಲಗಿ, ಅಕ್ಕತಂಗೇರಹಾಳ ಪಟ್ಟಣ ಪಂಚಾಯತಿಯಿಂದ ಅಕ್ಕತಂಗೇರಹಾಳ ಗ್ರಾಮವನ್ನು ಕೈ ಬಿಡಬೇಕೆಂದು ಆಗ್ರಹಿಸಿ ಅಂಕಲಗಿ ಗ್ರಾಮಸ್ಥರು ಸಮೀಪದ ಸುವರ್ಣ ಗಾರ್ಡನ್ ಬಳಿ ಪ್ರತಿಭಟನೆ ನಡೆಸಿ ಶುಕ್ರವಾರ ಸರಕಾರ ಸರಕಾರವನ್ನು ಒತ್ತಾಯಿಸಿದರು.

ಅಕ್ಕತಂಗೇರಹಾಳ ಗ್ರಾಮಗಳನ್ನು ಕೂಡಿಸಿ ಪಟ್ಟಣ ಪಂಚಾಯತಿ ಪರಿವರ್ತನಾ ಪ್ರದೇಶವೆಂದು ಪರಿಗಣಿಸಿ ಕಳೆದ 2021 ನ.11 ರಂದು ಅಧಿಸೂಚನೆ ಹೊರಡಿಸಿದ್ದು, ಇದಕ್ಕೆ ಆಕ್ಷೇಪಣೆ ಸಲ್ಲಿಸಲು ನ.30ರ ವರೆಗೆ ಅವಕಾಶ ನೀಡಲಾಗಿತ್ತು. ಈ ಕುರಿತು ಪೌರಾಡಳಿತ ಇಲಾಖೆಗೆ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪೌರಾಡಳಿತ ಇಲಾಖೆಯ ನಿರ್ದೇಶಕರಿಗೆ ಪಟ್ಟಣ ಪಂಚಾಯತಿ ಮಾಡಲು ಇರುವ ನಿಯಮಾವಳಿಗಳನ್ನು ಮೀರಿ ಸ್ಥಳೀಯ ಅಧಿಕಾರಿಗಳು ಒತ್ತಡಕ್ಕೆ ಮಣಿದು ತಪ್ಪು ಅಂಕಿ ಅಂಶಗಳನ್ನು ನೀಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ದೂರಿದ್ದಾರೆ.
ಅಂಕಲಗಿ ಗ್ರಾಮಸ್ಥರು ನ್ಯಾಯಕ ಸಮಿತಿ ರಚಿಸಿ ಸ್ಥಳೀಯವಾಗಿ ವಿಚಾರಿಸಲು ಒತ್ತಾಯಿಸಿದ್ದರುಮ ಆದರೆ ಈ ವಿಷಯವನ್ನು ಪರಿಗಣಿಸದೆ ಗೋಕಾಕ ಕಂದಾಯ ನಿರೀಕ್ಷಕರನ್ನು ನೇಮಿಸಿ 7-1-2021 ರಂದು ಗ್ರಾಪಂ ಅಕ್ಕತಂಗೇರಹಾಳದಲ್ಲಿ ಆಕ್ಷೇಪಣೆ ಪಡೆದುಕೊಂಡಿದ್ದಾರೆ. ಆಕ್ಷೇಪಣೆ ಸಲ್ಲಿಕೆಯ ಪೂರ್ಣ ವಿಡಿಯೋ ಚಿತ್ರಿಕರಣ ಮಾಡಿದ್ದಾರೆ. ಇದನ್ನು ಪರಿಶೀಲಿಸಿ ಅಂಕಲಗಿ, ಅಕ್ಕತಂಗೇರಹಾಳ ಗ್ರಾಮವನ್ನು ಬೇರ್ಪಡಿಸಬೇಕೆಂದು ಒತ್ತಾಯಿಸಿದರು.










