ಶೆಗುಣಶಿ ಗ್ರಾಮಸ್ತರಿಗೆ ಕೊಳಚೆ ಕಂಟಕ : ಸೋಮಾರಿಯಾದ್ರಾ ಪಿಡಿಓ
- shivaraj bandigi
- 4 Jul 2024 , 3:04 PM
- Athani
- 6211
ಅಥಣಿ : ತಾಲೂಕಿನ ಶೇಗುಣಶಿ ಗ್ರಾಮ ಅಂದ್ರೆ ಅದು ಆಧ್ಯಾತ್ಮಕ್ಕೆ ಸಾಕ್ಷಿಯಾದ ಗ್ರಾಮ ಇಲ್ಲಿ ಪ್ರಭಾವಿಗಳು, ಸರ್ಕಾರಿ ನೌಕರರ ತವರೂರು ಅಂದ್ರೆ ತಪ್ಪಾಗಲಾರದು ಅದರಲ್ಲೂ ವಿಶೇಷವಾಗಿ ರಾಜ್ಯದಲ್ಲೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೇಹದ ಅಂಗಾಗ ದಾನ ಮಾಡಿದ ಊರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ರೆ ಗ್ರಾಮದ ಈಗಿನ ವಾಸ್ತವ ಸ್ಥಿತಿಯನ್ನ ನೋಡಿದ್ರೆ ನೀವು ಕೂಡ ನಿಬ್ಬೆರಗಾಗೋದು ಗ್ಯಾರಂಟಿ.

ಹೌದು,, ಗ್ರಾಮದ ಪ್ರತಿ ಕಾಲೋನಿ ಮನೆ ಬಾಗಿಲಲ್ಲೆ ಕೊಳಚೆ ಆವರಿಸಿದ್ರು ಯಾರು ಗಮನ ಹರಿಸದ ದುರಂತ ಸ್ಥಿತಿ ಎದುರಾಗಿದೆ.

ರಾಜ್ಯದಲ್ಲಿ ಡೆಂಗ್ಯೂ ಅಂತ ಮಾರಕ ರೋಗ ತಾಂಡವವಾಡುತ್ತಿದ್ದರು ಇಲ್ಲಿಯ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿಯ ಇಚ್ಚಾಸಕ್ತಿಯ ಕೊರತೆಯಿಂದ ಗ್ರಾಮಸ್ಥರು ಪ್ರತಿನಿತ್ಯ ನರಕದಲ್ಲೆ ಕಾಲ ದುಡುವಂತಾಗಿದೆ.
ಗ್ರಾಮದಲ್ಲಿ ಹೈಟೆಕ್ ವೆವಸ್ಥೆ ಕಲ್ಪಿಸಬೇಕಾದ ಅಧಿಕಾರಿಗಳು ಕಂಡು ಕಾಣದಂತೆ ಮೌನವಾಗಿರುವುದು ಗ್ರಾಮದಲ್ಲಿ ಮಾರಕ ರೋಗಗಳನ್ನ ಆಹ್ವಾನಿಸುವಂತಿದೆ.
ಕೂಡಲೆ ಮೇಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಗಮನಿಸಿ ಮಕ್ಕಳ ಬದುಕಿಗೆ ಬೆಳಕಾಗಬೇಕಿದೆ.
ವರದಿ : ರಾಹುಲ್ ಮಾದರ










