ಬಿಜೆಪಿ ಸೇರಿದ ಶೆಟ್ಟರ್ : ಪುತ್ರ ಸಂಕಲ್ಪ ಹೇಳಿದ್ದು ಏನು ?
- shivaraj bandigi
- 25 Jan 2024 , 9:58 PM
- Belagavi
- 513
ಬೆಳಗಾವಿ :

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಾಕಷ್ಟು ವರ್ಷಗಳಿಂದ ಬಿಜೆಪಿ ಸೇರಿ ಸಾಕಷ್ಟು ಸೇವೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಮುಂದಾಗಿದ್ದಾರೆ ಎಂದು ಸಂಕಲ್ಪ ಶೆಟ್ಟರ್ ಹೇಳಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕದಿಂದ ಹೆಚ್ಚಿನ ಸ್ಥಾನ ನೀಡಲು ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ. ಇವತ್ತು ಬೆಳಗ್ಗೆ ದೇಶದ ಗೃಹ ಮಂತ್ರಿ ಅಮಿತ್ ಶಾ ಅವರ ಜೊತೆ ಸುಧೀರ್ಘವಾದ ಮಾತುಕತೆ ಆಗಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಅದನ್ನ ಪರಿಹಾರ ಮಾಡುವ ಭರವಸೆ ನೀಡಿದ್ದಾರೆ ಎಂದರು.
ಸಂಕಲ್ಪ ಅವರಿಗೆ ಹಾವೇರಿ ಲೋಕಸಭೆ ಟಿಕೆಟ್ ನೀಡುವ ವಿಚಾರಕ್ಕೆ ಉತ್ತರಿಸಿದ ಅವರು, ಟಿಕೆಟ್ ನೀಡುವುದು ಬಿಜೆಪಿ ಪಾರ್ಟಿಗೆ ಸೇರಿದ್ದು ಯಾವುದೆ ಬೇಡಿಕೆ ಇಲ್ಲದೆ ಸೇರಿದ್ದಾರೆ. ಲೋಕಸಭಾ ಟಿಕೆಟ್ ಕುರಿತು ಯಾವುದೇ ಚರ್ಚೆ ಆಗಿಲ್ಲ ಪಕ್ಷ ಸಂಘಟನೆ ಬಗ್ಗೆ ಅಷ್ಟೇ ಚರ್ಚೆ ಆಗಿದೆ ಎಂದರು.
ಬೆಳಗಾವಿಯಿಂದ ಲೋಕಸಭೆ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ದರಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿ ಕಳೆದ 7-8 ತಿಂಗಳಿಂದ ರಾಜ್ಯ ಪ್ರವಾಸ ಕೈಗೊಂಡಾಗ ಬಿಜೆಪಿ ಪಕ್ಷಕ್ಕೆ ಮರಳಿ ಬರಬೇಕು ಎನ್ನುವುದು ಕಾರ್ಯಕರ್ತರ ಆಸೆ ಆಗಿತ್ತು. ಆದ್ದರಿಂದ ಮತ್ತೆ ಪಕ್ಷಕ್ಕೆ ಬಂದಿರೋದು ತುಂಬಾ ಸಂತೋಷವಾಗಿದೆ ಎಂದರು.
ಜಗದೀಶ್ ಶೆಟ್ಟರ ಅವರಿಗೆ ಮಿನಿಸ್ಟರ್ ಆಗಬೇಕು ಎನ್ನುವುದು ಇದ್ದಿದ್ದರೆ ಯಾವುಗಲೋ ಆಗುತ್ತಿದ್ದರು ಜಗದೀಶ ಶೆಟ್ಟರ ಅವರು ಕಾರಣಾಂತರಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಈಗ ಮರಳಿ ಬಿಜೆಪಿಗೆ ಬಂದಿದ್ದಾರೆ ಎಂದರು.










