ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿಯ ಸದಸ್ಯರರಾಗಿ ಸಿದ್ದಪ್ಪ ಪಾಟೀಲ್ ನೇಮಕ
- 15 Jan 2024 , 2:04 AM
- Belagavi
- 116
ಬೆಳಗಾವಿ : ಗ್ರಾಮಾಂತರ ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರಾದ ಸಂಜೇಯ ಪಾಟೀಲ್ ಅವರು ಸದಸ್ಯರನಾಗಿ ಹಾಗೂ ಕಿತ್ತೂರು ವಿಭಾಗದ ಸಾಮಾಜಿಕ ಜಾಲತಾಣ ಪ್ರಭಾರಿಯಾಗಿ ಸಿದ್ದಪ್ಪ ಬಾಳಪ್ಪ ಪಾಟೀಲ್ ಅವರನ್ನು ನೇಮಕ ಮಾಡಿದ್ದಾರೆ.

ಖಾನಾಪೂರ ತಾಲೂಕಿನಲ್ಲಿ ಪಿ.ಜೆ.ಪಿ ಪಕ್ಷದ ಪರ ಹಲವಾರು ಉತ್ತಮ ಸೇವೆಗಳನ್ನು ಸಲ್ಲಿಸುತ್ತಾ, ಜನಪರ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ ಸೇವೆಯನ್ನು ಗುರ್ತಿಸಿ ಇನ್ನು ಉತ್ತಮ ರೀತಿಯ ಕಾರ್ಯವನ್ನು ನಿರ್ವಹಿಸಲು ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿಯ ಸದಸ್ಯರನ್ನಾಗಿ ಆಯ್ಕೇ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಸಂಜೇಯ ಪಾಟೀಲ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ್ ಪಾಟೀಲ್, ಸಂಚಾಲಕರಾದ ಸಂದೀಪ್ ದೇಶಪಾಂಡೆ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.










