ಸಿದ್ದರಾಮಯ್ಯ ಸಿಎಂ ಆಗಲಿ ಅಯ್ಯಪ್ಪಗೌಡ ಬ್ಯಾಟಿಂಗ್

ಬೆಂಗಳೂರು :ರಾಜಕೀಯ ಹಾಗೂ ಸಾಮಾಜಿಕವಾಗಿ ಸಾಕಷ್ಟು
ಅನುಭವ ಹೊಂದಿರುವ, ಮೋದಿ ಅವರಿಗಿಂತಲೂ ಅಪಾರವಾದ ಅಭಿಮಾನಿ ಬಳಗವನ್ನುಹೊಂದಿರುವ ಸಿದ್ದರಾಮಯ್ಯ ಈ ನಾಡು, ಈ ದೇಶ ಕಟ್ಟುವ ಎಲ್ಲ ಶಕ್ತಿ ಸಾಮರ್ಥ್ಯ ಹೊಂದಿರುವ ಸಿದ್ಧರಾಮಯ್ಯ ಅವರಿಗೆ ಈ ಬಾರಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕದ ರಾಜ್ಯ ಉಪಾಧ್ಯಕ್ಷರು ಅಯ್ಯಪ್ಪಗೌಡ ಗಬ್ಬೂರು ಒತ್ತಾಯಿಸಿದ್ದಾರೆ.  

promotions

ಕರ್ನಾಟಕ ರಾಜ್ಯದಲ್ಲಿ ದೇವರಾಜ್ ಅರಸು ನಂತರ ಐದು ವರ್ಷಗಳ ಕಾಲ ಸಂಪೂರ್ಣ ನಿಷ್ಕಳಂಕ ಮುಖ್ಯ ಮಂತ್ರಿಯಾಗಿ ಈ ನಾಡಿಗೆ ಸೇವೆ ಸಲ್ಲಿಸಿದ್ದಾರೆ.

promotions

ಸಾಮಾಜಿಕ ನೆಲೆಗಟ್ಟಿನಿಂದ ಸಿದ್ಧರಾಮಯ್ಯ ಅವರನ್ನು ಎಲ್ಲ ಸಮುದಾಯದ ಜನರು ಪ್ರೀತಿಸುತ್ತಿದ್ದಾರೆ. ಅಭಿಮಾನದಿಂದ
ಆರಾಧಿಸುತ್ತಿದ್ದಾರೆ. ಸಿದ್ದರಾಮಯ್ಯನವರು
ಮುಖ್ಯಮಂತ್ರಿಗಳಾಗಿದ್ದಾಗ ಜಾತ್ಯತೀತವಾಗಿ ಅನೇಕ ಜನಪರ ಯೋಜನೆಗಳು ಕೊಟ್ಟಿದ್ದಾರೆ.

ದಲಿತರು,ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಎಲ್ಲಾ ವರ್ಗದ  ಜನರು ಹೃದಯದಲ್ಲಿ ಸಿದ್ದರಾಮಯ್ಯನವರು ಇದ್ದಾರೆ. ರೈತ,ಕೃಷಿ ಕಾರ್ಮಿಕರು ಪರವಾಗಿ ಶ್ರಮಿಸುತ್ತಿರುವ ಸಿದ್ಧರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ನಿಯುಕ್ತಿಗೊಳಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಬೇರು ಮಟ್ಟದಲ್ಲಿ ಸದೃಢಗೊಳ್ಳುತ್ತದೆ. ಈ ಕುರಿತು ದೆಹಲಿ ವರಿಷ್ಠರು ಹಾಗೂ ಶಾಸಕರು ಸಮಾಗವಾಗಿ ಚರ್ಚಿಸಿ ಖಚಿತ ನಿರ್ಣಯ ಕೈಗೊಳ್ಳಬೇಕೆಂದು ಅವರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Read More Articles