ಸಿದ್ದರಾಯಪ್ಪ ಮಹಾರಾಜರ ಸೇವಾ ನಿಷ್ಠೆ ಆದರ್ಶ: ರೇವಣಸಿದ್ದೇಶ್ವರ ಮಹಾರಾಜರು

ಅಥಣಿ : ಸಿದ್ದರಾಯಪ್ಪ ಮಹಾರಾಜರ ಸೇವಾ ನಿಷ್ಠೆ ಇಂದಿನ ಪೀಳಿಗೆಗೆ ಆದರ್ಶ. ಅವರ ನಿಷ್ಕಾಮ ಕರ್ಮ, ತ್ಯಾಗ, ಅನುಕರಣಿ ಯವಾದುದು ಎಂದು ಸುಕ್ಷೇತ್ರ ಇಂಚಗೇರಿ ಮಠದ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು ಹೇಳಿದರು.

promotions

ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ಶಿದರಾಯಪ್ಪ ಮಹಾರಾಜರ ಪುಣ್ಯಾರಾಧನೆ ನಿಮಿತ್ತವಾಗಿ ಸರ್ವಧರ್ಮ ಭಾವೈಕ್ಯತೆ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.ಕಾಯಕ, ಅಧ್ಯಾತ್ಮ ಮತ್ತು ಪ್ರಪಂಚವನ್ನು ಸಾಮರಸ್ಯದಿಂದ ಸಮೀಕರಿಸಿ ಆತ್ಮೋನ್ನತಿಯ ದಾರಿಯಲ್ಲಿ ಸಾಗಿದವರು ಸಿದ್ದರಾಯಪ್ಪ ಮಹಾರಾಜರು ಅವರು ಸಾಗಿದ ದಾರಿ ಸುಲಭವಾದುದಲ್ಲ ನಲವತ್ತು ವರ್ಷ ಸತತ ಗುರುವಿನ ಸೇವೆ ಸ್ವಾತಂತ್ರ ಸಂಗ್ರಾಮ, ಗೋವಾ ವಿಮೋಚನೆ,   ಮಾಡುವ ಮೂಲಕವಾಗಿ ಅಪಾರವಾಗಿ ಗುರು ನಿಷ್ಠೆಯ ಮೂಲಕ ಹಿಂದೆ ಸರಿಯದೆ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲೇ ಸಾಗಿದ ಶಿದರಾಯಪ್ಪ ಮಹಾರಾಜರಂತಹ    ಸಾವಿರಾರು ಜನ ಆದರ್ಶ ಶಿಷ್ಯರ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಹಗಲಿರುಳು ಶ್ರಮಿಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡಲು ಸಾಧ್ಯವಾಯಿತು .ಹಾಗೆಂದೇ 

promotions

ಮಾಧವಾನಂದರು ಬಸವಣ್ಣನವರು ಕಂಡ ಜಾತ್ಯಾತೀತ  ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಯಿತು ಮಾಧವಾನಂದ ರು  ಇಪ್ಪತ್ತೈದು ಸಾವಿರ ಅಂತರ್ಜಾತೀಯ ಅಂತರ್ಧರ್ಮೀಯ ವಿವಾಹ ಮಾಡುವ ಮೂಲಕ ಬಸವಣ್ಣನವರ ಭಾವೈಕ್ಯತೆಯ ಸಮಾಜವನ್ನು ಕಟ್ಟಿದ ಮಹಾನ್ ವ್ಯಕ್ತಿಯಾಗಿದ್ದಾರೆ.ಇಂಚಗೇರಿ ಅಧ್ಯಾತ್ಮ ಪರಂಪರೆಯು ಜಾತ್ಯತೀತ ಸಮಾಜ ನಿರ್ಮಾಣ ಮಾಡಿ ಪ್ರತಿಯೊಬ್ಬ ಮಾನವ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸುವ ಮೂಲಕ ಪ್ರತಿಯೊಬ್ಬ ಜೀವಿಯ ಆತ್ಮ ಕಲ್ಯಾಣ ಬಯಸಿದ ಸಂಪ್ರದಾಯವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು. 

 ಯಕ್ಕಂಚಿ ಗುರುದೇವ ತಪೋವನದ  ಗುರುಪಾದ ಮಹಾಸ್ವಾಮಿಗಳು ಮಾತನಾಡುತ್ತಾ ಹನ್ನೆರಡನೇ ಶತಮಾನದ ಬಸವಣ್ಣನವರು ಕಂಡ ಆದರ್ಶ ಸಮಾಜವನ್ನು ಮಾಧವಾನಂದರ ನೇತೃತ್ವದಲ್ಲಿ ನವಸಮಾಜ ನಿರ್ಮಾಣ ಮಾಡಿ ಜಗತ್ತಿನಲ್ಲಿ ಜಾತ್ಯಾತೀತ ಪರಂಪರೆಯನ್ನು ರೂಢಿಸಿಕೊಂಡು ಎಲ್ಲ ಮನುಷ್ಯರನ್ನು ಒಂದೇ ಎಂದು ಭಾವಿಸಿ ಎಲ್ಲ ಮನುಷ್ಯರ ಆತ್ಮಕಲ್ಯಾಣವನ್ನು ಬಯಸಿದ ಪರಂಪರೆ  ಎಂದರೆ ಅದು ಇಂಚಗೇರಿ ಅಧ್ಯಾತ್ಮ ಪರಂಪರೆ ಎಂದು ಹೆಮ್ಮೆಯಿಂದ ಹೇಳಬಹುದು. ಇಂದಿನ ಪೂಜ್ಯ ರೇವಣಸಿದ್ದೇಶ್ವರ ಮಹಾರಾಜರ ನೇತೃತ್ವದಲ್ಲಿ ಇಂಚಗೇರಿ ಅಧ್ಯಾತ್ಮ ಪರಂಪರೆ ಮಾಧವಾನಂದರ ದಾರಿಯಲ್ಲಿ ಸಾಗುತ್ತಿರುವುದು ಸಂತಸದ ಸಂಗತಿ ಯಾಗಿದೆ.ಪ್ರತಿಯೊಬ್ಬ ವ್ಯಕ್ತಿ ನಿತ್ಯ ಪ್ರಪಂಚದಲ್ಲಿ ಶ್ರದ್ಧೆಯಿಂದ ಕಾಯಕ ಮಾಡಿ ನಿಷ್ಠೆಯಿಂದ ಧರ್ಮವನ್ನು ಆಚರಿಸಿ ಮೋಕ್ಷದ ಮಾರ್ಗಕ್ಕೆ ಸಾಗಬೇಕು ಎಂದು ಹೇಳಿದರು ಎಂದು ಹೇಳಿದರು . 

ಈ ವೇಳೆ ಶಂಕರಪ್ಪ ಮಹಾರಾಜರು, ಭೀಮಣ್ಣ ಮಹಾರಾಜರು,ಪರಶುರಾಮ ಮಹಾರಾಜರು, ಗಿರೀಶ ಮಹಾರಾಜರು, ಲಕ್ಷ್ಮಣ ಮಹಾರಾಜರು ಪ್ರವಚನ ನೀಡಿದರು. 

ಈ ವೇಳೆ ಹಿರಿಯರಾದ  ಬಸಣ್ಣ ಮಾನಿಂಗಪ್ಪಗೋಳ, ಸಿದ್ದಪ್ಪ ದೊಡ್ಡನಿಂಗಪ್ಪಗೋಳ, ಶಿವಾನಂದ ತೇಲಿ,  ಸಂಗಪ್ಪ ಬಡವಗೋಳ, ಸಿದ್ದಲಿಂಗ ಝಳಕಿ, ಭಾವೂರಾಯ ಝಳಕಿ, ಶಿವಪ್ರಭು ಅಥಣಿ, ವಿನೋಬಾ ದೊಡ್ಡನಿಂಗಪ್ಪಗೋಳ,ಸುರೇಶ ಖಡಕಿ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಡಾ .ರಾಮಣ್ಣ ದೊಡ್ಡನಿಂಗಪ್ಪಗೋಳ ಸ್ವಾಗತಿಸಿದರು ರಘುನಾಥ ದೊಡ್ಡನಿಂಗಪ್ಪಗೋಳ ವಂದಿಸಿದರು .    

ವರದಿ : ರಾಹುಲ್  ಮಾದರ 

Read More Articles