ಪ್ರಧಾನಿ ಮೋದಿ ವಿದ್ಯಾರ್ಹತೆ ಕೂರಿತು ಜೈಲಿನಿಂದ ಪತ್ರ ಬರೆದ ಸಿಸೋಡಿಯಾ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿ ಜೈಲಿನಲ್ಲಿರುವ ಆಪ್ ನಾಯಕ ಮನೀಶ್ ಸಿಸೋಡಿಯಾ ದೇಶದ ಜನತೆಯನ್ನು ಉದ್ದೇಶಿಸಿ ಪತ್ರ ಬರೆದಿದ್ದಾರೆ.

promotions

ಆಮ್ ಆದ್ಮಿ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ಪದವಿಗಳ ಅಸಲಿತನದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ನಡುವೆಯೇ ತಿಹಾರ್ ಜೈಲಿನಿಂದ ಈ  ಪತ್ರ ಬಂದಿದೆ.

promotions

ದೇಶದ ಯುವಕರು ಮಹತ್ವಾಕಾಂಕ್ಷೆ ಹೊಂದಿದ್ದಾರೆ, ಅವರು ಏನನ್ನಾದರೂ ಮಾಡಲು ಬಯಸುತ್ತಾರೆ, ಅವರು ಅವಕಾಶದ ಹುಡುಕಾಟದಲ್ಲಿದ್ದಾರೆ, ಅವರು ಜಗತ್ತನ್ನು ಗೆಲ್ಲಲು ಬಯಸುತ್ತಾರೆ, ಅವರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಏನನ್ನಾದರೂ ಮಾಡಲು ಬಯಸುತ್ತಾರೆ. 

ಚಹಾ ತಯಾರಿಸಲು ಗಟರ್ ಗ್ಯಾಸ್ ಬಳಸುವ ಬಗ್ಗೆ ಪ್ರಧಾನಿ ಮೋದಿಯವರ ಸಿದ್ಧಾಂತವನ್ನು ಉಲ್ಲೇಖಿಸಿದ ಸಿಸೋಡಿಯಾ ಟೀಕೆ ಮಾಡಿದ್ದಾರೆ  ಮತ್ತು ಅಂತಹ ಹೇಳಿಕೆಗಳು ದೇಶಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ.

Read More Articles