ಅಂಗಾರಕ ಸಂಕಷ್ಟ ಚತುರ್ಥಿಯ ವಿಶೇಷ
- 15 Jan 2024 , 2:59 AM
- Belagavi
- 490
ಅಂಗಾರಕ ಸಂಕಷ್ಟ ಚತುರ್ಥಿ ಮಂಗಳವಾರ 13-9-2022
ಅಂಗಾರಕ ಸಂಕಷ್ಟ ಚತುರ್ಥಿ ಆಚರಿಸಿದರೆ ಸಾಕು 21 ವ್ರತಗಳು ಮಾಡಿದ ಪುಣ್ಯ ಪ್ರಾಪ್ತವಾಗಲಿದೆ ಎಂಬ ನಂಬಿಕೆ ಇದೆ ದೇವರುಗಳಲ್ಲಿಯೇ ವಿಶೇಷ ಸ್ಥಾನಮಾನ ಗಣೇಶನಿಗೆ ಇದೆ. ಗಣೇಶನ ಆರಾಧನೆಗೆ ಸಂಕಷ್ಠಿ ವಿಶೇಷ ದಿನ. ಪ್ರತಿ ತಿಂಗಳ ಹುಣ್ಣಿಮೆಯ ಅಂದರೆ ಕೃಷ್ಣ ಪಕ್ಷದ ನಾಲ್ಕನೇ ದಿನವೇ ಈ ಸಂಕಷ್ಠಿ ಬರುತ್ತದೆ. ಈ ಸಂಕಷ್ಟಿ ದಿನ ಗಣೇಶನ ವ್ರತ ಆಚರಿಸಿದರೆ, ಮನೋಭಿಲಾಷೆ ಈಡೇರುತ್ತದೆ ಎಂಬ ಪ್ರತೀತಿ.

ಅದರಲ್ಲಿಯೂ ವರ್ಷದಲ್ಲಿ ಕೇವಲ ಒಂದೆರಡು ದಿನ ಬರುವ ಈ ಅಂಗಾರಕ ಸಂಕಷ್ಟಿ ಬಲು ವಿಶೇಷ. ಪ್ರತಿ ತಿಂಗಳು ಸಂಕಷ್ಟಿ ಮಾಡಲು ಸಾಧ್ಯವಾಗದವರು ಅಂಗಾರಕ ಸಂಕಷ್ಟ ಚತುರ್ಥಿ ಆಚರಿಸಿದರೆ ಸಾಕು 21 ವ್ರತಗಳು ಮಾಡಿದ ಪುಣ್ಯ ಪ್ರಾಪ್ತವಾಗಲಿದೆ ಎಂಬ ನಂಬಿಕೆ ಇದೆ.

ಅಂಗಾರಕ ಅಂದರೆ ಮಂಗಳವಾರ ಬರುವ ಈ ಸಂಕಷ್ಟಿಯ ವ್ರತದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ
ಅಂಗಾರಕ ಎಂದರೆ ಶುಭ,
ಅಂಗಾರಕ ಎಂದರೆ ಮಂಗಳವಾದದ್ದು ಎಂದು ಅರ್ಥ,
ಮಂಗಳ ಉಂಟುಮಾಡುವ ಸಂಕಷ್ಟ ಚತುರ್ಥಿಯನ್ನು ಅಂಗಾರಕ ಚತುರ್ಥಿ ಎನ್ನಲಾಗುತ್ತದೆ. ಈ ಅಂಗರಾಗ ಸಂಕಷ್ಟ ಚತುರ್ಥಿಯಂದು ಉಪವಾಸವಿದ್ದು, ಗಣೇಶನ ಪೂಜಿಸಿದರೆ, ನಾವು ಮಾಡಿಕೊಂಡ ಸಂಕಲ್ಪಗಳು ನೆರವೇರುತ್ತದೆ ಎಂಬ ಪ್ರತೀತಿ ಇದೆ.
ಗಣೇಶನ ಭಜಿಸಿ
ಇನ್ನು ಅಂಗಾರಕ ಸಂಕಷ್ಟಿಯಂದು ಮುಂಜಾನೆಯ ಸ್ನಾನ ಮಾಡಿ ಗಣೇಶನ ಪೂಜಿಸಬೇಕು. ಗಣಪನಿಗೆ ಇಷ್ಟವಾದ ಮೋದಕ ಅಥವಾ ಹಾಲು, ಹಣ್ಣು ನೈವೇದ್ಯ ಮಾಡಬೇಕು. ಉಪವಾಸ ವಿದ್ದು ಗಣೇಶ ಸ್ತುತಿಸುತ್ತ ದಿನ ಕಳೆಯಬೇಕು. ರಾತ್ರಿ ಚಂದ್ರ ದರ್ಶನದ ಬಳಿಕ ವ್ರತ ಸಂಪನ್ನಗೊಳಿಸಿ, ಗಣೇಶನ ಪೂಜಿಸಿ ಆಹಾರ ಸೇವಿಸಬೇಕು.
ಗರಿಕೆ ಅರ್ಪಿಸಿ ಗಣೇಶನಿಗೆ ಗರಿಕೆಗಳು ಎಂದರೆ ಬಲು ಪ್ರೀತಿ. ಈ ಹಿನ್ನಲೆ 27 ಗರಿಕೆಗಳನ್ನು ಗಣೇಶನಿಗೆ ಅರ್ಪಿಸಿ, ಮನೋಬಲ ಈಡೇರಿಕೆಗೆ ಪ್ರಾಪ್ತಿಸಿದರೆ ಒಳಿತು. ಮಾಘ ಮಾಸದಲ್ಲಿ ಬರುವ ಈ ಚೌತಿಯಂದು ಗಣೇಶನನ್ನು ಪ್ರತಿಷ್ಟಾಪಿಸಿ ಆಚರಿಸುವ ಪ್ರತೀತಿ ಕೂಡ ಇದೆ.
ಕೃಪೆ :ವಿವೇಕಾನಂದ ಆಚಾರ್ಯ Army Rtd










