ನೇತಾಜಿ ಸುಭಾಸ ಚಂದ್ರ ಬೋಸ ಅವರ ಜಯಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮ :MB ಜಿರಲಿ
- 15 Jan 2024 , 2:44 AM
- Belagavi
- 200
ಬೆಳಗಾವಿ :ನೇತಾಜಿ ಸುಭಾಸ ಚಂದ್ರ ಬೋಸ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ ನಿ ವತಿಯಿಂದ ನೇತಾಜಿಯವರ 127 ನೇ ಜಯಂತಿ ಹಾಗು ಅಮೃತ ಮಹೋತ್ಸವ ಕ್ರಾಯಕ್ರಮ.

ರಾಷ್ಟ್ರ ಭಕ್ತಿಯೇ ಪರಮಧರ್ಮವಾಗಿದ್ದ ಭಾರತ ಮಾತೆಯ ಧೀಮಂತ ಪುತ್ರ ಸದಾ ಸರ್ವಾದ ಸ್ಪೂರ್ತಿಯ ಸೆಲೆಯಾದ್ ನೇತಾಜಿಯವರ ನೆನಪಿನ ಜ್ಯೋತಿಯನ್ನು ಬೆಳಗೋಣ ಬನ್ನಿ ಎಂದು ಕರೆ.

ನೇತಾಜಿ ಸುಭಾಸ ಚಂದ್ರ ಬೋಸರವರನ್ನು ನೆನೆದ MB ಜಿರಲಿ
199ರಂದು ನೇತಾಜಿ ಸುಭಾಸ ಚಂದ್ರ ಬೋಸ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ ನಿ ಪ್ರಾರಂಭ
ಶ್ರೀ ನೇತಾಜಿ ಸುಭಾಷಚಂದ್ರ ಬೋಸರ ಸಂದೇಶ ಸಾರಿದ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ
ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ: ಅದು ನಾವು ಪಡೆದುಕೊಳ್ಳಬೇಕಾದದ್ದು ಎಂದು ನಂಬಿ ನಡೆದವರು ನೇತಾಜಿ ಸುಭಾಷಚಂದ್ರ ಭೋಸ್. “ನೀವು ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ". ಎಂಬ ನೇತಾಜಿಯವರ ಕರೆಯನ್ನು ಅಕ್ಷರಶಃ ಕಾರ್ಯಗತಗೊಳಿಸಿ ಸಾವಿರಾರು ಮಂದಿ ವೀರರು ರಕ್ತ ಚೆಲ್ಲ ಭಾರತದ ಸ್ವಾತಂತ್ರ್ಯವನ್ನು ಸಮೀಪಗತಗೊಳಸಿದರು. ಅತ್ಯಂತ ಉದಾತ್ತ ಅರ್ಥದಲ್ಲಿ ಸ್ವಾತಂತ್ರ್ಯ ಸೇನಾನಿಯಾಗಿದ್ದವರು ನೇತಾಜಿ.
ಕೇವಲ ಮಿಲಿಟರಿ ಪರಿಭಾಷೆಯಲ್ಲಿ ಅರ್ಧಾಂತಕವಾಯಿತೆಂದು ಭಾವಿಸಲಾದ ಐ.ಎನ್.ಎ. ಅಭಿಯಾನವೇ ಭಾರತದಲ್ಲಿ ಆಂಗ್ಲಾಧಿಕಾರದ ಅಂತ್ಯವನ್ನು ಸನ್ನಿಹಿತಗೊಳಿಸಿದದು. ಅಲ್ಪಕಾಲದಲ್ಲಿ ಇಡೀ ಪೂರ್ವ ಏಷ್ಯಾದ ಭಾರತೀಯರೆಲ್ಲರಲ್ಲ ಸಮರೋತ್ಸಾಹ ಚಿಮ್ಮಿಸಿದರು, ನೇತಾಜಿ.
ನಿಶ್ಚಲ ದೃಷ್ಟಿಯೂ, ಪ್ರಖರ ಧೈಯನಿಷ್ಠೆಯೂ ಇದ್ದಲ್ಲಿ ಪ್ರತಿಕೂಲತೆಗಳ ನಡುವೆಯೂ ಎಂಥ ಉನ್ನತ ನಾಯಕತ್ವ ವಿಕಾಸಗೊಳಸಬಲ್ಲದು - ಎಂಬುದನ್ನು ಸುಭಾಷಚಂದ್ರ ಭೋಸರ ಇತಿಹಾಸಾರ್ಹ ಜೀವನ ಎತ್ತಿತೋರಿಸುತ್ತದೆ.
ಇಂತಹ ಮಹನೀಯರ ಜನ್ಮದಿನೋತ್ಸವವನ್ನು ಆಚರಿಸುವುದೇ ನಮಗೆ ಹೆಮ್ಮೆಯ ವಿಷಯ. ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಸಹಭಾಗಿಗಳಾಗಬೇಕಾಗಿ ವಿನಂತಿ.










