ರಾಜ್ಯ ಸರಕಾರದ ವಿರುದ್ಧ ಸಿಡಿದ್ದೇದ ಶ್ರೀರಾಮ ಸೇನೆ

ಬೆಳಗಾವಿ:

promotions

ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಮಂಗಳವಾರ ಶ್ರೀರಾಮ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.

promotions

ದೊಡ್ಡಬಳ್ಳಾಪುರದಲ್ಲಿ ಅಕ್ರಮವಾಗಿ 35 ಟನ್ ಗೋಮಾಂಸ ವಾಹನ ಹಿಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶ್ರೀ ರಮೇಶಗೌಡ, ಬೆಂಗಳೂರು ಮಹಾನಗರ ಪ್ರಧಾನ ಕಾರ್ಯದರ್ಶಿ ಸೇರಿದಂತೆ 16 ಗೋ ರಕ್ಷಕರಿಗೆ 48 ದಿವಸ ಜೈಲ್ ಹಿಂಸೆ ನೀಡಿದೆ. ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರಮೋದ ಮುತಾಲಿಕರಿಗೆ ಶಿವಮೊಗ್ಗ,ಚಿಕ್ಕಮಗಳೂರು ಜಿಲ್ಲಾ ಪ್ರವೇಶ ನಿರ್ಬಂಧ ಹುಬ್ಬಳ್ಳಿಯಲ್ಲಿ ಕೇಸ ಹಾಕಿದ್ದಾರೆ.

ಶ್ರೀರಾಮ ಸೇನಾ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿಯವರಿಗೆ ಚಿಕ್ಕಮಗಳೂರು ಜಿಲ್ಲೆ ಪ್ರವೇಶ ನಿರ್ಬಂಧ ಚಿಕ್ಕಮಗಳೂರಲ್ಲಿ ಶ್ರೀರಾಮ ಸೇನಾ ರಾಜ್ಯ ಕಾರ್ಯದರ್ಶಿ ಶ್ರೀ ರಾಜು ಖಾನಪ್ಪನವರ, ವಿಭಾಗ ಅಧ್ಯಕ್ಷ ಶ್ರೀ ರಂಜೀತ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಗ್ಯಾನೇಂದ್ರ ಜೈನ ಬಂಧನವಾಗಿದೆ ಎಂದು ತಿಳಿಸಿದ್ದಾರೆ.

ಮಂಗಳೂರಿನ ಹಿಂದೂ ಕಾರ್ಯಕರ್ತರಿಗೆ ಗಡಿಪಾರು ಆದೇಶ, ಮಂಗಳೂರಲ್ಲಿ ಹಿಂದೂ ಹೋರಾಟಗಾರರ ಬಂಧನ,ಗುಂಡಾ ಆಕ್ಟ್ ಕಲ್ಬುರ್ಗಿ ಹಿಂದೂ ಕಾರ್ಯಕರ್ತರಿಗೆ ರೌಡಿ ಶೀಟ್ ತೆರೆದಿದ್ದಾರೆ ಎಂದು ದೂರಿದರು.

Read More Articles