ದಲಿತರ ವಾಸ ಮಾಡುವ ಏರಿಯಾದಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬುನಾರ್ತಿರುವ ವಟಾರಗಳು

ಗಂಗಾವತಿ : ನಗರಸಭೆ  ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 27  ಚರಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಚರಂಡಿಯಲ್ಲಿರುವಂತಹ ಕಸವನ್ನು ತೆಗೆದು ಮೇಲೆ ಹಾಕಿ ಒಂದು ವಾರ ಕಳೆಯುತ್ತಾ ಬಂದರೂ ಕೂಡ ಅದನ್ನು ತೆಗೆದು ಸ್ವಚ್ಛಗೊಳಿಸದೆ ಕಸುವನ್ನು ಹಾಗೆ  ರಸ್ತೆ ಮೇಲೆ ಬಿಟ್ಟ ಸ್ವಚ್ಛಗೊಳಿಸದೆ ನಗರಸಭೆ ಸಿಬ್ಬಂದಿಗಳ ಕಣ್ಣಿಗೆ ಕಂಡರೂ ಕೂಡ ಕಾಣದಂತೆ ಸುಮ್ಮನೆ ನೋಡಿಕೊಂಡು ಓಡಾಡುತ್ತಿದ್ದಾರೆ.

promotions

 ಪ್ರತಿನಿತ್ಯ ಇದೆ ರಸ್ತೆ ಮೂಲಕ ಕಸ ತೆಗೆಕೋಡು ಹೊಗುವ ಗಾಡಿ ಪ್ರತಿ ದಿನ ಆ ರಸ್ತೆಯ ಮೇಲೆ ಓಡಾಡುತ್ತದೆ ಅದರೆ ನಗರಸಭೆ ಸಿಬ್ಬಂದಿಗಳಿಗೆ ರಸ್ತೆಯ ಮೇಲಿರುವ ಕಸದ ರಾಶಿ ತಿಪ್ಪಿಗುಂಡಿ ಆಗಿರುವುದು ನಗರಸಭೆ ಸಿಬ್ಬಂದಿಗಳ ಕಣ್ಣೆಗೆ   ಕಂಡರೂ ಕೂಡ ಕಾಣದಂತೆ ಇದೆ ರಸ್ತೆಯ ಮೇಲೆ ತಿರುಗಾಡುತ್ತಿದ್ದಾರೆ ಮತ್ತು ರಸ್ತೆ ಮೇಲೆ ಇರುವ ಕಸವನ್ನು ತೆಗೆದುಹಾಕುವುದು ಬಿಟ್ಟು ಅದನ್ನು ನೋಡಿಕೊಂಡು ಪ್ರತಿನಿತ್ಯ ಹಾಗೆ ಸುಮ್ಮನೆ  ಓಡಾಡುತ್ತಾರೆ.

promotions

ಅದರೆ ಆ ರಸ್ತೆಯಲ್ಲಿರುವ ಕಸದ ರಾಶಿಯು ಪುನಃ ಅದೇ ಚರಂಡಿ ಒಳಗಡೆ ಬಿದ್ದು  ಗಬ್ಬು ನಾರುತ್ತಿರುವ ಪರಿಸ್ಥಿತಿ ಉಂಟಾಗಿದೆ ಈ  ರಸ್ತೆ ಮೇಲೆ ಶಾಲೆಗೆ ಹೋಗುವ ಮಕ್ಕಳು ಮತ್ತು ವೃದ್ಧರು ಹಾಗೂ ಪ್ರತಿನಿತ್ಯ ಕೆಲಸಕ್ಕೆ ಹೋಗುವ ಸಾರ್ವಜನಿಕರು ಮೂವಿಗೆ ಬಟ್ಟೆ ಕಟ್ಟಿಕೊಂಡು ಓಡಾಡುವ ಇಲ್ಲಸ್ಥಿತಿ ಬಂದುಬಿಟ್ಟಿದೆ ಇದೆ ರಸ್ತೆಯ ಮೇಲೆ ಕುಪ್ಪೆ ಕುಪ್ಪೆ ಕಸದ ರಾಶಿ ಎದ್ದು ಕಾಣುತ್ತಿದೆ ಇದರ ಬಗ್ಗೆ ಚರಂಡಿ ಕ್ಲೀನ್ ಮಾಡುವ ಸಿಬ್ಬಂದಿಯು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಇಷ್ಟು ನಿರ್ಲಕ್ಷಿಸುತ್ತಾರೆ ಎನ್ನುವುದು ತಿಳಿಯದಂತೆ ಆಗಿದೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.

 ಕಾರಣ ಗೊತ್ತಾಗ್ತಾ ಇಲ್ಲ ಆದರೆ ಇಲ್ಲಿ ದಲಿತರು ವಾಸ ಮಾಡುತ್ತಿರುವ ಕಾಲೋನಿ ಆಗಿರುವುದರಿಂದ ಈ ರೀತಿಯಾಗಿ ಇಷ್ಟೊಂದು ನಿರ್ಲಕ್ಷ  ಮಾಡುತ್ತಿದ್ದಾರೆ ಎಂಬ ಅನುಮಾನಗಳು ಎದ್ದು ಕಾಣುತ್ತವೆ. ಇದೇ ರೀತಿಯಾಗಿ  ಮೇಲ್ಜಾತಿಯವರು  ವಾಸ ಮಾಡುವ ಕಾಲೊನೆಯಾಗಿದ್ದರೆ ಕೂಡಲೇ ಚರಂಡಿ ತೆಗೆದು ಎರಡು ಅಥವಾ ಮೂರು ದಿನದಲ್ಲಿ ಸಂಪೂರ್ಣವಾಗಿ ವಠಾರದಲ್ಲಿರುವಂತಹ ಕಸವನ್ನು ಎಲ್ಲಾ ಕ್ಲೀನ್ ಮಾಡುತ್ತಿದ್ದರು ಅದರೆ 27 ವಾರ್ಡ್ ನಲ್ಲಿ ಹೆಚ್ಚಾನೆಚ್ಚು ದಲಿತರು ವಾಸ ಮಾಡುತ್ತಾರೆ ಎಂಬ ಕಾರಣಕ್ಕೆ ಈ ರೀತಿಯಾಗಿ ಚರಂಡಿ ಕ್ಲೀನ್ ಮಾಡಿದ ಕಸವನ್ನು ತೆಗೆಯದೆ ಹಾಗೇ ಬಿಟ್ಟಿದ್ದಾರೆ ಎಂದರೆ ಇದು ಅಧಿಕಾರಿಗಳಿಗೆ ಎಷ್ಟರಮಟ್ಟಿಗೆ ಸರಿ ಶೋಭೆ ಅನಿಸುತ್ತದೆ ಎಂಬುದು ತಿಳಿಯದಂತೆ ಆಗಿದೆ. 

ಆದರೆ ಸರ್ಕಾರವು ಸ್ವಚ್ಛ ಭಾರತ ಎಂಬ ಅಭಿನಯ ಯೋಜನೆಗೆ ಕೋಟಿ ಕೋಟಿ ಹಣವನ್ನು ಮಂಜೂರು ಮಾಡುತ್ತದೆ ಹಣವನ್ನು ಎಲ್ಲಿ ಹೋಯಿತು ಎತ್ತ ಹೋಯಿತು ಎಂಬುದು ತಿಳಿದಂತೆ ಆಗಿದೆ ಎಂದು ಸಾರ್ವಜನಿಕರಲ್ಲಿ ಯಕ್ಷಪ್ರಶ್ನೆಯಾಗಿದೆ ಇನ್ನು  ಮುಂದೆಯಾದರೂ ನಮ್ಮ ಪ್ರಜಾ ಸೇನೆ ವರದಿಯನ್ನು ನೋಡಿದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಮೇಲಿರ್ತಕ್ಕಂತ ಕಸದ ರಾಶಿಯನ್ನು ಕ್ಲೀನ್ ಮಾಡಲಿಕ್ಕೆ ಮುಂದಾಗುತ್ತಾರೋ ಅಥವಾ ಅದೇ ರಸ್ತೆಯ ಮೇಲೆ ಇರುವಂತಹ ಕಸವನ್ನು ಪುನಃ ಚರಂಡಿ ಒಳಗಡೆ  ತಳ್ಳಿ ದಲಿತರು ಗಬ್ಬುನಾತ ವಾಸನೆಯನ್ನು ಕುಡಿದುಕೊಂಡು ಬದುಕಲಿ ಎಂಬ ರೀತಿಯಲ್ಲಿ ಸುಮ್ಮನಾಗುತ್ತಾರೋ ಮುಂದೆ ಕಾದುನೋಡಬೇಕಾಗಿದೆ.

ದಲಿತರು ವಾಸ ಮಾಡುವ ವಟಾರಗಳಲ್ಲಿ ಸುಮಾರು ಆರು ತಿಂಗಳಿಗೆ  ಒನ್ ಟೈಮ್ ಮಾತ್ರ ಚರಂಡಿ ಕ್ಲೀನ್ ಮಾಡುತ್ತಾರೆ ಇನ್ನುಳಿದ ದಿನಗಳಲ್ಲಿ ಯಾವೊಬ್ಬ ಅಧಿಕಾರಿಗಳಾಗಲಿ  ಅಥವಾ ಸಂಬಂಧಪಟ್ಟ ನಗರಸಭೆ ಸದಸ್ಯರಾಗಲಿ ಈ ಕಡೆ ಸ್ವಲ್ಪ ಕಣ್ಣತ್ತಿ ನೋಡುವುದಿಲ್ಲ ಇದರ ಬಗ್ಗೆ ಅಧಿಕಾರಿಗಳಿಗೆ ಇಷ್ಟು ಸಲ ಮೌಖಿಕವಾಗಿ ಹೇಳಿದರು ಕೂಡ ನಿರ್ಲಕ್ಷಿಸುತ್ತಾರೆ. ಈ ರೀತಿಯಾಗಿ ಮುಂದೆ ಆದರೆ ಮುಂದಿನ ದಿನಗಳಲ್ಲಿ ಇಡೀ ದಲಿತ ಸಮುದಾಯ ಸೇರಿಕೊಂಡು ಬೃಹತ್ ಮಟ್ಟದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಅಧಿಕಾರಿಗಳಿಗೆ ಪತ್ರಿಕೆ ಮುಖಾಂತರ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಹೇಳಿದರು.

ಹುಲಿಗೇಶ್ ಕೊಜ್ಜಿ  ಕರವೇ ಯುವ ಘಟಕ ಅಧ್ಯಕ್ಷರು

ವರದಿ  : ಆರ್ ಚನ್ನಬಸವ (ಮಾನ್ವಿ)

Read More Articles