ಬೆಳಗಾವಿಯಲ್ಲಿ ವಿಚಿತ್ರ ಬಲೂನ ಪತ್ತೆ : ಆತಂಕಗೊಳಗಾದ ಗ್ರಾಮಸ್ಥರು
- Krishna Shinde
- 15 Jan 2024 , 1:27 AM
- Belagavi
- 229
ಬೆಳಗಾವಿ :ಜಿಲ್ಲೆಯ ಬಾಗೇವಾಡಿ ಹತ್ತಿರದ ಗದ್ದಿನಕರಿವಿನಕೊಪ್ಪ ಗ್ರಾಮದ ಹೊಲದಲ್ಲಿ ವಿಚಿತ್ರ ಬಲೂನ ಬಂದು ಬಿದ್ದಿದ್ದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.

ಎಲ್ಲಿಂದ ಬಂದಿದೆ ಯಾವಾಗ ಹಾರಿ ಬಂದಿದೆ ಎಂದು ಗೊತ್ತಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಬಲೂನಲ್ಲಿ ಕೆಲ ಎಲೆಕ್ಟ್ರಿಕ್ ಮಷೀನಗಳು ಪತ್ತೆ ಯಾಗಿದ್ದು ಏನು ಎಂತ ತಿಳಿಯದ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೋಲಿಸರು ಬಲೂನನ್ನು ವಶಕ್ಕೆ ಪಡೆದುಕೊಂಡಿದ್ದಾರೆ .
video by :Shivaraj B.
ಕೆಲ ದಿನಗಳ ಹಿಂದೆ USAನಲ್ಲಿ ಚೈನೀಸ ಸ್ಪೈ ಬಲೂನ್ ಸದ್ದು ಮಾಡಿದ್ದು ಅದೆ ಥರ ಇದು ಕೂಡ ಇರಬಹುದೆಂಬ ಶಂಕೆ ಗ್ರಾಮಸ್ಥರಲ್ಲಿ ಮೂಡಿಸಿದೆ.










