ಸಾಧನೆಯಿಂದ ಯಶಸ್ಸು ಪಡೆಯಲು ಸಾಧ್ಯ: ಕವಟಗಿಮಠ

ಬೆಳಗಾವಿ : ಯಶಸ್ಸನ್ನು ಸಾಧನೆಯಿಂದ ಪಡೆಯಲು ಸಾಧ್ಯ. ನಿರ್ದಿಷ್ಟವಾದ ಗುರಿಯೊಂದಿಗೆ ಬದುಕಿನಲ್ಲಿ ವಿಶಿಷ್ಟವಾದುದನ್ನು ಸಾಧಿಸಬೇಕು. ಜೀವನದ ಸಾರ್ಥಕತೆಯೆಡೆಗೆ ಕೊಂಡೊಯಬೇಕೆAದು ಕೆಎಲ್‌ಇ ಸಂಸ್ಥೆಯ ನಿರ್ದೇಶಕರು ಹಾಗೂ ಮಾಜಿ ವಿಧಾನ ಪರಿಷತ್‌ನ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರು ಹೇಳಿದರು.

promotions

ಅವರು ಲಿಂಗರಾಜ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಸಾಧನೆಗೈದ ವಿದ್ಯಾರ್ಥಿಗಳಿಗೆ ಪಾರಿತೋಷಕವನ್ನು ವಿತರಿಸಿ ಮಾತನಾಡಿದರು. ಪಿಯುಸಿಯು ವಿದ್ಯಾರ್ಥಿ ಬದುಕಿನಲ್ಲಿ ವಿಶಿಷ್ಟವಾದ ತಿರುವಾಗಿದ್ದು, ಉತ್ತಮವಾದ ಕೋರ್ಸುಗಳನ್ನು ಮಾಡಲು ಸಾಕಷ್ಟು ಅವಕಾಶಗಳಿವೆ.

promotions

ನಮಗೆ ಇಷ್ಟವಾದ ಕೋರ್ಸುಗಳನ್ನು ಪಡೆದು ಭವಿಷ್ಯತ್ತಿನಲ್ಲಿ ಉನ್ನತ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಬೇಕು. ನಾವು ಯಾವುದೇ ಹುದ್ದೆಗೆ ಹೋದರು ಅಹಂಮಿಕೆ ನಮಗಿರಬಾರದು. ಹೆತ್ತರವನ್ನು ಎಂದೂ ಮರೆಯಬಾರದು. ಕೆಎಲ್‌ಇ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾದ ಸೇವೆಯನ್ನು ನೀಡುತ್ತಿದೆ. ಇಲ್ಲಿಯ ಸೌಲಭ್ಯಗಳನ್ನು ಉತ್ತಮವಾದ ತರಬೇತಿಯನ್ನು ಪಡೆದು ಜೀವನವನ್ನು ರೂಪಿಸಿಕೊಳ್ಳುವ ಹೊಣೆಗಾರಿಕೆ ನಿಮ್ಮ ಮೇಲಿದೆ. ನಮ್ಮೊಳಗೆ ಅಂತರ್‌ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು.

ಇಂದು ಎಲ್ಲ ಕ್ಷೇತ್ರ ಸ್ಪರ್ಧೆ ತೀವ್ರಗೊಂಡಿದ್ದು ಆ ನೆಲೆಯಲ್ಲಿ ನಾವು ಸಿದ್ಧಗೊಳ್ಳಬೇಕು. ಸವಾಲುಗಳನ್ನು ಸಮರ್ಥವಾಗಿ ಸ್ವೀರಿಸಿದಾಗ ಮಾತ್ರ ಜೀವನದಲ್ಲಿ ಅದ್ಭುತವಾದುದನ್ನು ಸಾಧಿಸಲು ಸಾಧ್ಯ. ನಮ್ಮೊಳಗೆ ಯಾವುದೇ ಕೀಳಿರಿಮೆಯನ್ನು ತಾಳದೆ, ಹುರುಪು ಹಾಗೂ ಉತ್ಸಾಹದಿಂದ ಅಧ್ಯಯನದಲ್ಲಿ ನಿರತರಾಬೇಕು.

ವಿದ್ಯಾರ್ಥಿಗಳ ಜೀವನವು ಬಂಗಾರಮಯ ಎಂಬುದನ್ನು ಅನುಕರಣೆಗೆ ತರಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ವಹಿಸಿದ್ದರು. ಅವರು ಮಾತನಾಡಿ ಕನಸುಗಳನ್ನು ಸಾಕಾರಗೊಳಿಸುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ನಿಮ್ಮ ಸಾಧನೆಯ ಮುಖ ಹೀಗೆ ಬದುಕಿನುದ್ದಕ್ಕೂ ಮುನ್ನಡೆಯಲಿ ಎಂದು ಶುಭಕೋರಿದರು. ಆಜೀವ ಸದಸ್ಯ ಪ್ರೊ. ಶೀತಲ ನಂಜಪ್ಪನವರ, ಪದವಿಪೂರ್ವ ಪ್ರಾಚಾರ್ಯ ಪ್ರೊ.ಗಿರಿಜಾ ಹಿರೇಮಠ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರೊ.ಪ್ರಶಾಂತ ಕೊಣ್ಣೂರ ವಂದಿಸಿದರು.

Read More Articles