ಕೆಎಲ್ಇಯಲ್ಲಿ ಯಶಸ್ವಿ ಲೀವರ್ ಕಸಿ: ಡಾ.ಕೋರೆ
- 15 Jan 2024 , 12:48 AM
- Belagavi
- 210
ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಜನರು ಮೃತಪಟ್ಟ ದೇಹವನ್ನು ಸುಡುವ ಬದಲು ಮೂಡ ನಂಬಿಕೆ ಸುಟ್ಟು ಮೃತಪಟ್ಟ ವ್ಯಕ್ತಿಯ ದೇಹ ದಾನ ಮಾಡಿ ಮತ್ತೊಬ್ಬರಿಗೆ ಬೆಳಕಾಗುವ ಕೆಲಸವನ್ನು ಅವರ ಕುಟುಂಬಸ್ಥರು ಮಾಡಬೇಕು ಎಂದು ಕೆಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ಭಾಗದಲ್ಲಿ ಮೃತಪಟ್ಟ ವ್ಯಕ್ತಿಯ ದೇಹವನ್ನು ಮಣ್ಣು,ಮಾಡುತ್ತಿದ್ದಾರೆ. ಅದರ ಬದಲು ನಮ್ಮ ಜನ ಜಾಗೃತರಾಗಬೇಕಿದೆ. ಅವರ ಮೃತದಿಂದ ನಾಲ್ಕೈದು ಜನರಿಗೆ ಜೀವ ಉಳಿಸಬಹುದು. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.
ಹಾವೇರಿ ಕಾಲೇಜಿನಲ್ಲಿ ಲೀವರ್ ಕಸಿ ಮಾಡಿದ ಅಜ್ಜ ಶಿಪಾಯಿ ಕೆಲಸ ಮಾಡುತ್ತಿದ್ದ. ಬ್ರೈನ್ ಡೆಡ್ ಆದ ಲೀವರ್ ಕಸಿ ಮಾಡುವುದಕ್ಕೆ ಸುಮಾರು 23 ಲಕ್ಷ ರೂ. ವೆಚ್ಚ, ಸಹಜ ಕಿಡ್ನಿ ಕಸಿ ಮಾಡಲು ಸುಮಾರು 50 ಲಕ್ಷ ರೂ. ವೆಚ್ಚವಾಗುತ್ತಿದೆ ಎಂದರು. ನೆರೆಯ ಗೋವಾ ರಾಜ್ಯದಿಂದ ಲೀವರ್ ಕಸಿಗೆ ಹೆಚ್ಚಿನ ಬೇಡಿಕೆ ಇದೆ. ವಿಶೇಷ ತರಬೇತಿಗಾಗಿ ಹೊರ ದೇಶಕ್ಕೆ ನಮ್ಮ ಕೆಎಲ್ಇ ವೈದ್ಯಕೀಯ ತಂಡವನ್ನು ಕಳುಹಿಸಲಾಗುವುದು ಎಂದರು.
ಡಾ. ಸೋನಾಲ್ ಅಸ್ಥಾನ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಕೆಎಲ್ಇ ಡಾ. ಪ್ರಭಾಕರ ಕೋರೆ ಅವರ ಆಸ್ಪತ್ರೆಯಲ್ಲಿ ಅಥಣಿಯ 39 ವರ್ಷದ ವ್ಯಕ್ತಿಯ ಲೀವರ್ ನ್ನು ಹಾವೇರಿಯ 19 ವರ್ಷದ ಯುವಕನಿಗೆ ಕಸಿ ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಮೆಟ್ರೊ ಪಾಲಿಟಿನ್ ನಗರಗಳ ಆಸ್ಪತ್ರೆಗೆ ಹೋಲಿಸಿದರೆ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಕೇವಲ ಶೇ. 5 ವೆಚ್ಚದಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗುತ್ತಿದೆ. ಅಂಗಾಂಗ ಕಸಿಗೆ ಆರೋಗ್ಯ ಕರ್ನಾಟಕ ಗೂ ಆಯುಷ್ಯಮಾನ ಭಾರತ, ಕಾರ್ಮಿಕ ವಿಮಾ ಹಾಗೂ ಇನ್ನಿತರ ವಿಮಾ ಯೋಜನೆಗಳಲ್ಲಿ ಧನಸಹಾಯ ಲಭ್ಯವಿದೆ ಎಂದರು.
ಮಾನವನ ಅಂಗಾಂಗಳು ಸಂಪೂರ್ಣವಾಗಿ ಕಾವ್ಯ ಸ್ಥಗಿತಗೊಳಿಸಿದಾಗ, ಅಂತಿಮ ಹಂತವೇ ಅಂಗಾಂಗ ಕಸಿ, ಅಂಗಾರಿಗೆ ದಾನವು ಅಂಗ ವೈಫಲ್ಯಗೊಂಡ, ರೋಗಿಗಳಿಗೆ ಹೊಸ ಜೀವನದ ಬಾಗಿಲು ತೆರೆದಿದೆ, ವೈದ್ಯ ವಿಜ್ಞಾನ ಸಂಕಷ್ಟು ಆವಿಷ್ಕಾರಗಳಿಂದ ಅಂಗಾಂಗ ದಾನದ ಪರಿಕಲ್ಪನೆ, ಸಾಕಷ್ಟು ಜನಪ್ರಿಯವಾಗುತ್ತಿದ್ದು, ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರು ಯಾವುದೋ ಕಾರಣಕ್ಕೆ ಮೆದುಳು ನಿಷ್ಕ್ರಿಯಗೊಂಡಾಗ ಅಂಗಾಂಗಳನ್ನು ದಾನ ಮಾಡಲು ಸ್ವಇಚ್ಛೆಯಿಂದ ಉತ್ಸುಕರಾಗುತ್ತಿದ್ದಾರೆ. ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿದ್ದ, ಅಂಗಾಂಗ ದಾನ ಮತ್ತು ಕಸಿ ಶಸ್ತ್ರಚಿಕಿತ್ಸೆಯು ದ್ವಿತೀಯ ಹಂತದ ನಗರಗಳಲ್ಲಿಯು ಸುಲಭವಾಗಿ ನಡೆಯುತ್ತಿದೆ. ಅದಕ್ಕೆಲ್ಲ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿರುವ ಆತಧುನಿಕ ವೈದ್ಯ ವಿಜ್ಞಾನದ ಸೌಲಭ್ಯವೆ ಕಾರಣ ಎಂದರು.
ಡಾ. ಸಂತೋಷ ಹಜಾರೆ, ಡಾ. ಎಂ.ವಿ.ಜಾಲಿ, ಡಾ. ಸುದರ್ಶನ ಚೌಗುಲಾ, ಡಾ. ರಾಜೇಶ ಮಾನೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










