ಸಮರ್ಪಕ ವಿದ್ಯುತ್ ಪೂರೈಸಿ! ಉಗ್ರ ಹೋರಾಟಕ್ಕೆ ಸಜ್ಜು ! ಶೀತಲ ಪಾಟೀಲ
- shivaraj bandigi
- 14 May 2024 , 1:07 PM
- Belagavi
- 395
ಚಿಕ್ಕೋಡಿ : ಕೃಷ್ಣಾ ನದಿ ತೀರದ ರೈತರಿಗೆ ಸಮರ್ಪಕ ವಿದ್ಯುತ್ ಪುಇರೈಕೆಯಾಗದ ಹಿನ್ನಲೆಯಲ್ಲಿ ಈ ಭಾಗದ ರೈತರು ಮುಖಂಡ ಶೀತಲ ಪಾಟೀಲ ನೇತೃತ್ವದಲ್ಲಿ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಶೀತಲ ಪಾಟೀಲ ಮಾತನಾಡಿ, ವಿದ್ಯುತ ವ್ಯತಯದಿಂದ ನಾವು ಬೆಳೆದ ಬೆಳೆದ ಬೆಳೆ ಒಣಗುತ್ತಿವೆ. ಈ ಕುರಿತು ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ರೈತರ ಮಾತಿಗೆ ಬೆಲೆ ನೀಡದ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಕೃಷ್ಣಾ ನದಿ ಪಕ್ಕದ ಚಿಕ್ಕೋಡಿ ತಾಲೂಕಿನ ಮಾಂಜರಿ, ಅಂಕಲಿ ಗ್ರಾಮದ ರೈತರಿಗೆ ದಿನಕ್ಕೆ ಎಳು ಗಂಟೆ ವಿದ್ಯುತ್ ನೀಡುತ್ತಿದ್ದಿರಿ.
ಆದರೆ ಕಾಗವಾಡ ತಾಲೂಕಿನ ಉಗಾರ, ಕುಸಬಾಳ, ಮಳವಾಡ ಐನಾಪೂರ ಗ್ರಾಮದ ರೈತರಿಗೆ ಎಳು ಗಂಟೆ ವಿದ್ಯುತ್ ನೀಡಲಾಗುತ್ತಿಲ್ಲ ಎಂದು ಪ್ರಶ್ಇಸಿದರ ಅವರು
ಸದ್ಯ ಕೃಷ್ಣಾ ನದಿ ನೀರು ಕುಡಿಯಲ್ಲಿಕೆ ಯೋಗ್ಯವಿಲ್ಲ.
ಕೃಷ್ಣಾ ನದಿಯಲ್ಲಿನ ನೀರು ಬಿಸಲಿನ ತಾಪಕ್ಕೆ ಆವಿಯಾಗಿ ಹೋಗುವ ಬದಲು ಕೃಷ್ಣಾ ನದಿ ತೀರದ ತೈತರಿಗೆ 3 ಗಂಟೆ ವಿದ್ಯುತ್ ಬದಲು ಎಳು ಗಂಟೆ ವಿದ್ಯುತ್ ನೀಡಿ ಎಂದರು.
ಒಂದು ವೇಳೆ ನಮ್ಮಗೆ ಎಳು ಗಂಟೆ ಕರೆಂಟ್ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು
ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.










