ಕ್ಯಾಂಟನಮೆಂಟ್ ಸಿಇಓ ಅನುಮಾನಸ್ಪಾದ ಸಾವು : ಸ್ಥಳಕ್ಕೆ ಪೊಲೀಸರ ದೌಡು

ಬೆಳಗಾವಿ :

promotions

ಬೆಳಗಾವಿ ದಂಡುಮಂಡಳಿ ಸಿಇಒ ಕೆ.ಆನಂದ ನಿಗೂಡವಾಗಿ ಮೃತಪಟ್ಟ ಘಟನೆ ನಡೆದಿದೆ‌

promotions

ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿರುವ ಕೆ. ಆನಂದ ಅವರ ಸರಕಾರಿ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ದಂಡು ಮಂಡಳಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಆನಂದ ಅವರು ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್‌‌ನ ತಮಿಳುನಾಡು ಮೂಲದವರಾಗಿದ್ದಾರೆ. 

ಇಂದು ಬೆಳಗ್ಗೆ ಧ್ವಾರ ತೆಗೆಯದೇ ಇರುವಾಗ ಕ್ಯಾಂಪ್ ಪೊಲೀಸರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಬಾಗಿಲು ತೆಗೆದು ಒಳ ನುಗ್ಗಿದಾಗ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಕ್ಯಾಂಪ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಎರಡೂ ದಿನಗಳ ಹಿಂದೆ ದಂಡುಮಂಡಳಿಯ ಕಚೇರಿಯಲ್ಲಿ ಸಿಬಿಐ ದಾಳಿಯಾಗಿತ್ತು. ಇದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

Read More Articles