ಕೆಆರ್ ಪಿ ಪಕ್ಷ ಗೆಲುವಿನ ಹರಕೆ ತೀರಿಸಲು ಅಜ್ಮೀರ್ ಗೆ ಕುಟುಂಬ ಸಮೇತ ತೆರಳಿದ ಸೈಯದ್ ಜಿಲಾನ್ ಪಾಷ

ಗಂಗಾವತಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗೆಲುವಿನ ಹರಕೆ ತೀರಿಸಲು ಇಂದು ರಾಜಸ್ಥಾನದ ಅಜ್ಮೀರ ಗೆ ತೆರಳಿದ ಸೈಯದ್ ಜಿಲಾನ್ ಪಾಷ ಖಾದ್ರಿ ಕುಟುಂಬ.

promotions

ಕಲ್ಯಾಣ ರಾಜ್ಯ ಪ್ರಗತಿ ಹೆಸರಿನಲ್ಲಿ ನೂತನ ಪಕ್ಷ ಕಟ್ಡುವ ಮೂಲಕ ರಾಷ್ಟ್ರ ಮತ್ತು ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಗಾಲಿ ಜನಾರ್ಧನ ರೆಡ್ಡಿಯವರ ಕೆಆರ್ಪಿ ಪಕ್ಷ ಗೆಲುವಿನ ಹರಕೆ ಸಲ್ಲಿಸಲು ಇಂದು ರಾಜಸ್ಥಾನದ ಅಜ್ಮೀರ್ ಗೆ ಕುಟುಂಬ ಸಮೇತವಾಗಿ ಸೈಯದ್ ಜಿಲಾನ್ ಪಾಷ ಖಾದ್ರಿ ತೆರಳಿದರು.

promotions

ಗಂಗಾವತಿ ಕ್ಷೇತ್ರದ ಈ ಬಾರಿ ಚುನಾವಣೆಯಲ್ಲಿ ರೆಡ್ಡಿಯವರ ಪಕ್ಷದ ಎಲ್ಲಾ ಕಾರ್ಯಗಳಲ್ಲಿ ಸದಾಕಾಲವೂ ಜೊತೆಗಿದ್ದು ಗೆಲುವಿನ ರೂವಾರಿಗಳಲ್ಲಿ ಒಬ್ಬರು ಮತ್ತು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸೈಯದ್ ಜಿಲಾನ್ ಪಾಷ ಖಾದ್ರಿ ಕುಟುಂಬ ಪ್ರವಾಸದ ಮಧ್ಯದಲ್ಲಿ ಕಲಬುರಗಿಯ ಖಾಜಾ ಬಂದೇ ನವಾಜ್ ದರ್ಗಾಕ್ಕೆ ಭೇಟಿ ನೀಡಿ ದರ್ಶನದ ನಂತರ ಹೈದರಾಬಾದ್ ಮೂಲಕ ರಾಜಸ್ಥಾನದ ಅಜ್ಮೀರ ಗೆ ತೆರಳಿ ಹರಕೆ ಸಲ್ಲಿಸಲಿದ್ದಾರೆ. 

Read More Articles