ತಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಬೇಕಾಗಿದೆ ದೊಡ್ಡ ಮಟ್ಟದ ಚಿಕಿತ್ಸೆ
- 15 Jan 2024 , 12:16 AM
- Belagavi
- 198
ಅಥಣಿ : ತಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ರೋಗಿಗಳು ಆತಂಕದಲ್ಲೇ ಆಸ್ಪತ್ರೆಗೆ ಹೋಗುವಂತಾಗಿದೆ. ಆಸ್ಪತ್ರೆ ಮುಂಭಾಗ ನೋಡುತ್ತಿದ್ದಂತೆ ರೋಗಿಗಳ ರಕ್ತದೊತ್ತಡ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆ ಮುಂಬಾಗ ಯಾವ ಕ್ಷಣದಲ್ಲಾದರೂ ಕುಸಿದು ಬಿದ್ದೆ ಬಿಡಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆ ವೈದ್ಯರು ಈ ಕಟ್ಟಡದ ಮುಂಭಾಗದಲ್ಲಿ ಇಲ್ಲಿ ಯಾರೂ ನಿಲ್ಲಬೇಡಿ ಅಪಾಯ ಸಂಭವಿಸಬಹುದು ಎಂದು ಫಲಕವನ್ನು ಹಾಕಿದ್ದಾರೆ. ಕಳೆದ ೨೦೧೯/ ೨೦೨೦ ವರ್ಷದಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಕಟ್ಟಡ ಸಂಪೂರ್ಣ ಜಲಾವೃತವಾದ ಹಿನ್ನೆಲೆ ಸದ್ಯ ಆಸ್ಪತ್ರೆ ಶೀತಲಾ ವ್ಯವಸ್ಥೆ ತಾಳಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವ ಕ್ಷಣದಲ್ಲಾದರೂ ಕಟ್ಟಡದ ಕುಸಿದರೆ ಯಾರು ಹೊಣೆ, ಹೊಸ ಕಟ್ಟಡ ನಿರ್ಮಾಣವಾಗುವರಿಗೆ ತಾತ್ಕಾಲಿಕವಾಗಿ ಚಿಕಿತ್ಸೆಯನ್ನು ಬೇರೆ ಕಡೆ ನೀಡಬೇಕೆಂದು ತಂಗಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.










