ನೂತನ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರೆಗೆ ಕೃತಜ್ಞತೆಗಳು

ಬೆಂಗಳೂರು : ಸಿದ್ದರಾಮಯ್ಯ ಅಭಿಮಾನಿಗಳು ಬೆಂಗಳೂರು ಸಿದ್ದರಾಮಯ್ಯ ನಿವಾಸದಲ್ಲಿ ಜೈ ಸಿದ್ದು, ಜೈ ಟಗರು, ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗುವ ಮೂಲಕ ನಗು ಮುಖದಿಂದ ಸಿದ್ದರಾಮಯ್ಯ ಭಾವಚಿತ್ರಗಳನ್ನು ಕೈಯಲ್ಲಿ ಹಿಡಿದು ನೂತನ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರೆಗೆ ಕರ್ನಾಟಕ ರಾಜ್ಯದ ಜನತೆಯ ಪರವಾಗಿ ಹೃದಯ ಪೂರ್ವಕ ಕೃತಜ್ಞತೆಗಳು ಎಂದು ಕುರುಬ ಸಮಾಜದ ಯುವ ನಾಯಕಿ ಚೈತ್ರ (ರಚನಾ)ಲಿಂಗರಾಜ್,ಜೀವನ್,ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘ ಯುವ ಘಟಕದ ರಾಜ್ಯ ಉಪಾಧ್ಯಕ್ಷರು ಅಯ್ಯಪ್ಪಗೌಡ ಗಬ್ಬೂರು ಸಿದ್ದರಾಮಯ್ಯ ಭಾವಚಿತ್ರಗಳು ಹಿಡಿದು ಘೋಷಣೆ ಕೂಗಿ ಖುಷಿ ಪಟ್ಟರು.
 
ಬಡವರು ಬಂಧು,ಅಹಿಂದ ನಾಯಕ ಸಿದ್ದರಾಮಯ್ಯನವರು ಈ ನಾಡಿನ ಒಳಿತಿಗಾಗಿ ಕೋಟ್ಯಂತರ ಅಭಿಮಾನಿಗಳು ಆಸೆ ಒಂದೇ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು  ಸಿದ್ದರಾಮಯ್ಯ ಎಲ್ಲಾ ವರ್ಗದ ಜನರ ಹೃದಯದಲ್ಲಿದ್ದಾರೆ ಆಸೆ ಇಂದು ಹಿಡೇರಿದೆ ಎಂದರು.

promotions

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಮಾಡಿರುವುದರಿಂದ ದೆಹಲಿಯ ವರಿಷ್ಠರಿಗೆ ಕೃತಜ್ಞತೆಗಳು ಎಂದರು.

promotions

ನೂತನ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು  ಕೊಟ್ಟ ಎಲ್ಲಾ ಭರವಸೆಗಳು ಈಡೇರಿಸುತ್ತಾರೆ,ಬಡವರಿಗೆ, ರೈತ ಕಾರ್ಮಿಕರಿಗೆ ಜನಪರ ಯೋಜನೆಗಳನ್ನು ಕೊಟ್ಟು ನಿಷ್ಕಳಂಕ  ಮುಖ್ಯಮಂತ್ರಿಗಳು ಆಗಿ ಮತ್ತೊಮ್ಮೆ ಐದು ವರ್ಷಗಳ ಕಾಲ ಆಡಳಿತ ಜನಪರ ಆಡಳಿತ ನಡೆಸುವ ಖಚಿತ ಭರವಸೆ ನಮಗಿದೆ ಎಂದರು.

ಕುರುಬರ ಹೇಳಿದ ಮಾತು  ಇಂದಿಗೂ ಸುಳ್ಳಾಗಿಲ್ಲ ಮುಂದೆ ಸುಳ್ಳಾಗದೋ ಇಲ್ಲ ವಿಜಯನಗರ ಜಿಲ್ಲೆಯಲ್ಲಿ ಮೈಲಾರಲಿಂಗ ಕಾರಣಿಕೊತ್ಸವ ಸಂದರ್ಭದಲ್ಲಿ "ಅಂಬಲಿ ಅಳಿಸಿತು ಕಂಬಳಿ ಬಿಸಿತ್ತಲೇ ಪರಾಕ್" ಎಂಬ ಮಾತು ಇಂದು ಸತ್ಯವಾಗಿದೆ ಎಂದರು. ವಿಧಾನಸೌಧದಲ್ಲಿ ಸಿದ್ದರಾಮಯ್ಯನವರು ಖುರ್ಚಿ ಮೇಲೆ ಕಂಬಳಿ ಹಾಕಿ 20 ರಂದು ಪ್ರಮಾಣ ವಚನಾ ಸ್ವೀಕರಿಸಿ ಅಧಿಕಾರ ನಡೆಸುತ್ತಾರೆ ಎಂದರು.

ಇಡೀ ರಾಜ್ಯದಲ್ಲಿ ಕುರುಬ ಸಮಾಜ ಶೇಕಡಾ 90% ರಷ್ಟು ಮತ ಸಿದ್ದರಾಮಯ್ಯ ಎಂಬ ಹೆಸರಿಗೆ ಮತ ಹಾಕಿದ್ದಾರೆ. ನಮ್ಮ ಸಮುದಾಯದ ಆಗ್ರಗಣ್ಯ ನಾಯಕ,ಸಿದ್ದರಾಮಯ್ಯನವರು ಕೊನೆ ಚುನಾವಣೆ ಆಗಿರುವುದರಿಂದ  ನೂತನ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸುತ್ತಿರುವುದು ಯುಗಾದಿ ಹಬ್ಬದ ತರಹ ಮನೆಯಲ್ಲಿ ಹಬ್ಬ ಮಾಡಿ ಖುಷಿ ಪಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ  ಅಯ್ಯಪ್ಪಗೌಡ ಗಬ್ಬೂರು ಕರ್ನಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕದ ರಾಜ್ಯ ಉಪಾಧ್ಯಕ್ಷರು ಹಾಗೂ ಯುವ ನಾಯಕಿ ಚೈತ್ರ (ರಚನಾ) ಲಿಂಗರಾಜ್ ,ಸಿದ್ದರಾಮಯ್ಯ ಅಪ್ಪಟ ಅಭಿಮಾನಿ ಜೀವನ್ ಹಾಗೂ ಸಮಸ್ತ ಸಿದ್ದರಾಮಯ್ಯ ಅಭಿಮಾನಿಗಳು ಉಪಸ್ಥಿತರಿದ್ದರು.

Read More Articles