ಈಗೀನ ರಾಜ್ಯ ಸರ್ಕಾರ ಹುಚ್ಚರ ಸಂತೆಯಾಗಿದೆ. ಆರ್ ಅಶೋಕ

ಬೆಳಗಾವಿ : ಮೊನ್ನೆತಾನೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ‌ ಮಾಡಿದ್ದಾರೆ ಈಗ ಹಾಲಿನ ದರ ಏರಿಕೆ ಮಾಡಿರುವದರಿಂದ ರೋಷಿಹೋದ ಜನರು ‌ಕಾಂಗ್ರೇಸ್ ಸರ್ಕಾರಕ್ಕೆ ಛೀ ಮಾರಿ ಮಾಡಿ ಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ. ಅಶೋಕ ಹೇಳಿದರು. ಅವರು ಬೆಳಗಾವಿಯ ಸರ್ಕೀಟ್ ಹೌಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಾವುದೇ ಮುಂದಾಲೋಚನೆ ಮಾಡದೆ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಈಗ ಸರ್ಕಾರ ಪರದಾಡುತ್ತಿದೆ. ಸ್ಟಾಂಪ್ ಡ್ಯೂಟಿ ಆಲ್ಕೊಹಾಲ್ ವಿದ್ಯುತ್ ದರ ಏರಿಕೆ ಮಾಡಿದ್ದಾರೆ. ಪೆಟ್ರೋಲ್ ಡಿಸೇಲ್ ಬೆಲೆ‌ ಏರಿಕೆಯಿಂದ ಐದರಿಂದ ಆರು ಸಾವಿರ ಪ್ರತಿ ಮನೆಗೆ ತೆರಿಗೆ ಬೀಳುತ್ತಿದೆ ಈಗ ಮತ್ತೆ ಜನರ ಮೇಲೆ ಬರೆ ಎಳೆಯುವ ಕೆಲಸಕ್ಕೆ ಕೈ ಹಾಕಿ ಹಾಲಿನ ದರ ಏರಿಕೆ ಮಾಡಿದೆ ಎಂದು ಆರೋಪಿಸಿದರು. 

promotions

ನಮ್ಮ ಸರ್ಕಾರ ಇದ್ದಾಗ ಒಂದು ರೂಪಾಯಿ ಏರಿಕೆ ಮಾಡಿದಾಗ ಹೆಣದ ಮೆರವಣಿಗೆ, ಬೈಕ್ ಮೆರವಣಿಗೆ ಮಾಡಿದ್ದರು ಈಗಿನ ಕಾಂಗ್ರೇಸ್ ಸರ್ಕಾರ ತುಗಲಕ್ ದರ್ಬಾರ್ ನಡೆಸಿದೆ ಎಂದರು. 

promotions

ಸರ್ಕಾರಿ ನೌಕರರ ಸಂಬಳ ಕೊಡುವದಕ್ಕೂ ಸಹ ಸರ್ಕಾರದ ಬಳಿ ದುಡ್ಡಿಲ್ಲ. ವೇತನ ಪರಿಷ್ಕರಣೆ ಸಹ ಕ್ಯಾಬಿನೇಟ್ ಗೆ ಬಂದು‌ನಿಂತಿದೆ ಅದಕ್ಕಾಗಿ 15 ರಿಂದ 19 ಸಾವಿರ ಕೋಟಿ ರೂ. ಬೇಕಾಗುತ್ತದೆಎಂದರು. 

 ಐದಲ್ಲ ಐವತ್ತು ಗ್ಯಾರಂಟಿ ಯೋಜನೆ ಕೊಡಿ, ಆದರೆ ಅದಕ್ಕೆ ಮುಂದಾಲೋಚನೆ ಇರಬೇಕು. ನುಡಿದಂತೆ ನಡೆದಿದ್ದೇವೆ ಎನ್ನುವ ಸಿದ್ದರಾಮಯ್ಯ ಇದೇ ನಾ ನಿಮ್ಮ‌ನಡೆ ಎಂದು ಪ್ರಶ್ನಿಸಿದರು. 

ಬಸ್ ದರ ಏರಿಕೆ ಮಾಡುವ ಪ್ರಸ್ತಾವನೆಯೂ ಕೂಡಾ ಸರ್ಕಾರದ ಮುಂದೆ ಇದೆ ಅದನ್ನೂ ಸಹ ಮಾಡಿಬಿಡಿ, 136 ಸ್ಥಾನ ಇದ್ದರೂ ಸಹ ಮೊನ್ನೆ ಲೋಕಸಭೆಯಲ್ಲಿ ಜನ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ ಎಂದರು. 

ಸಿದ್ದರಾಮಯ್ಯನ ಸರ್ಕಾರ ದ್ವೇಷದ ರಾಜಕೀಯ ಮಾಡ್ತಿದ್ದಾರೆ ಪಾರ್ಲಿಮೆಂಟ್ ನಲ್ಲಿ ಮತ ಬರದಿದ್ದಕ್ಕೆ ಈ ರೀತಿ ಮಾಡ್ತಿದ್ದಾರೆ ಎಂದರು. 

ಈಗಾಗಾಲೇ ನಾವು ತೀರ್ಮಾಣ ತೆಗೆದುಕೊಂಡಿದ್ದು ಜುಲೈ 4 ಅಥವಾ 4 ನೇ ತಾರೀಖು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡತೇವಿ ಎಂದರು.

Read More Articles