ಉಗ್ರ ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ರೈತರ ಕಾರ್ಮಿಕ ಹಾಗೂ ಮಹಿಳಾ ಸಂಘಗಳು
- 15 Jan 2024 , 2:13 AM
- Belagavi
- 225
ಬೆಳಗಾವಿ :ದಿನಾಂಕ 26-12-2022 ರಂದು ರೈತರ ಕಾರ್ಮಿಕ ಹಾಗೂ ಅರಣ್ಯ ಒತ್ತುವರಿ ಸಾಗುವಳಿದಾರರ ಹಾಗೂ ಮಹಿಳೆಯರ ವಿವಿಧ ಬೇಡಿಕೆ ಗೋಸ್ಕರ ಸುವರ್ಣ ಸೌಧ ಹತ್ತಿರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ದಶಕಗಳಿಂದ ರೈತರು ಕೃಷಿ ಕೂಲಿ ಕಾರ್ಮಿಕರು ಮಹಿಳೆಯರು ಹೋರಾಟ ಮಾಡುತ್ತಾ ಬಂದರು ಇಲ್ಲಿಯವರೆಗೆ ಜಲಂತ ಸಮಸ್ಯೆಗಳು ಸಮಸ್ಯೆಗಳಾಗಿ ಉಳಿದಿದೆ ಆದಕಾರಣ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಹೋರಾಟ ಅನಿವಾರ್ಯವಾಗಿದೆ.

ನರೇಗಾ ಕಾರ್ಮಿಕರ ಬೇಡಿಕೆಗಳು :-
ನರೇಗಾ ಯೋಜನೆಯನ್ನು ವರ್ಷಪೂರ್ತಿ ಜಾರಿಗೊಳಿಸಬೇಕು. - ನರೇಗಾ ಕಾರ್ಮಿಕರಿಗೆ ದಿನಗೂಲಿ 600 ಕ್ಕೆ ಹೆಚ್ಚಿಸಬೇಕು.
ನರೇಗಾ ಕಾರ್ಮಿಕರಿಗೆ ಕಾರ್ಮಿಕ ಕಾರ್ಡಗಳನ್ನು ನೀಡಬೇಕು.
ಕೃಷಿ ತೋಟಗಾರಿಕೆ ಹಾಗೂ ಅರಣ್ಯ , ಇಲಾಖೆಗೆ ರೈತರ ಹೊಲಗಳಿಗೆ ನರೇಗಾ ಯೋಜನೆಯನ್ನು ವಿಸ್ತರಿಸಬೇಕು.
ಸಕಾಲಕ್ಕೆ ಕೂಲಿ ಮೊತ್ತವನ್ನು ಪಾವತಿಸಬೇಕು. ನರೇಗಾ ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆಯುತ್ತವೆ ಇದನ್ನು ತಡೆಗಟ್ಟಲುಸೂಕ್ತ ಕಾನೂನು ಕ್ರಮವನ್ನು ಜಾರಿಗೊಳಿಸಬೇಕು.
ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕೆಲಸ ನೀಡುವಲ್ಲಿ ಸಾಕಷ್ಟು ವಿಳಂಬ ಮಾಡುತ್ತಿದ್ದಾರ ಬೋಗಸ್ ಬಿಲ್ಲುಗಳನ್ನು ತೆಗೆಯುತ್ತಿದ್ದಾರೆ ಎಂದು ದೂರಿದ್ದಾರೆ.
ರೈತರ ಬೇಡಿಕೆಗಳು :- 1938ರಿಂದ ಸಾಗುವಳಿ ಮಾಡ್ತಾ ಬಂದರು ಅರಣ್ಯ ಒತ್ತುವರಿ ಸಾಗುವಳಿದಾರರಿಗೆ ಹಕ್ಕು ಪತ್ರ
ನೀಡಿರುವುದಿಲ್ಲ. ತಕ್ಷಣ ಹಕ್ಕು ಪತ್ರಗಳನ್ನು ಸರ್ಕಾರ ನೀಡಬೇಕು.ಅರಣ್ಯ ಒತ್ತುವರಿ ಸಾಗುವಳಿದಾರರ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ ಪಡೆಯಬೇಕು ಮತ್ತೆ ಕೇಸುಗಳನ್ನು ದಾಖಲಿಸಬಾರದು ಹಾಗೂ ಕುರಿಗಾಯಿಗಳ ಮೇಲೆ ಕೇಸ್ ಹಾಕುವುದನ್ನ ತಕ್ಷಣ ನಿಲ್ಲಿಸಬೇಕು.
ತೊಗರಿ ಬೆಳೆಗಾರರಿಗೆ ಕ್ವಿಂಟಲೆ 13000 ಬೆಂಬಲ ಬೆಲೆಯನ್ನು ನೀಡಬೇಕು ಹಾಗೂ ಬೆಳೆ ಪರಿಹಾರ ಬೆಳ ಇಮೆ ರೈತರಿಗೆ ತಲುಪುತ್ತಿಲ್ಲ ಇನ್ನುಳಿದ ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಬೇಕು.
ಕಬ್ಬು, ಬೆಳೆಗಾರರಿಗೆ 3500 ದರ ಘೋಷಣೆ ಮಾಡಬೇಕು
ಕಬ್ಬಿನಲ್ಲಿ ಬರುವ ಉಪ ಉತ್ಪನ್ನಗಳಲ್ಲಿ ಲಾಭಾಂಶವನ್ನು ನೀಡಬೇಕು.
ಕೋ ಆಪರೇಟಿವ್ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರಿ ಎಂ ಡಿ ಗಳನ್ನು ನೇಮಿಸಬೇಕು.
ಸರ್ಕಾರ ಕಬ್ಬು ದರ ಟನ್ ಗೆ 50 ರೂಪಾಯಿ ಹೆಚ್ಚುವರಿ ಘೋಷಣೆ ಮಾಡಿದ್ದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಹಾಗೂ ವಿದ್ಯುತ್ ಖಾಸಗಿಕರಣ ತಕ್ಷಣ ನಿಲ್ಲಿಸಬೇಕು. ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಇದನ್ನು ತಕ್ಷಣ ನಿಲ್ಲಿಸಬೇಕು.
ಕೃಷಿ ಭವನವನ್ನು ಈಗ ವಾಣಿಜ್ಯ ಚಟುವಟಿಕೆಗೆ ಬಳಸಿಕೊಂಡಿದ್ದಾರೆ
ಬೆಳಗಾವಿ ನಗರದ ಕಂಟೋನಮೇಂಟಿ ರಜಿಸ್ಪರ ನಂ. ಜಿ.ಎಲ್.ಆರ್ ನಂ.316 ರಲ್ಲಿನ ಲೋಕೋಪಯೋಗಿ ಇಲಾಖೆಗೆ ಸೇರಿದ 34.24 ಗುಂಟೆ ಜಾಗೆಯನ್ನು ಸರ್ಕಾರದ ಕ್ರಮಾಂಕ: ಎಫ್.ಸಿ/ಎಫ್ಜಿಎಲ್-66/ ದಿನಾಂಕ: 03-1966 ರನ್ಮಯ ಲೋಖೋಪಯೋಗಿ ಇಲಾಖೆಗೆ ಸರ್ಕಾರವು ಅಧಿಕೃತವಾಗಿ ಬಾಡಿಗೆ ನಿಗಧಿಪಡಿಸಲು ಅಧಿಕಾರ 10- ನೀಡಿರುತ್ತದೆ, ಸರ್ಕಾರವು ಲೀಜ್‌ದಾರರ ಮನವಿ ಮೇರೆಗೆ ರೈತರಿಗೆ ಬಹುಉಪಯೋಗಿ ರೈತ ಸಮುದಾಯಕ್ಕೆ ಅನುಕೂಲವಾಗುವಂತಹ ಕಟ್ಟಡಗಳ ಅವಕಾಶ ಕಲ್ಪಿಸುವ ಷರತ್ತಿನ ಮೇರೆಗೆ ಲೀಜ್ ಮಂಜೂರು ಮಾಡಲಾಗಿರುತ್ತದೆ.
1) ಕೃಷಿ ಉತ್ಪನ್ನಗಳ ಶೇಖರಣೆಗಾಗಿ, ಶೀಥೀಲಕರಣ ಘಟಕ
2) ರೈತ ಜನಾಂಗದವರಿಗಾಗಿ ವಿಶ್ರಾಂತಿ ಗ್ರಹ
3) ರೈತ ಸಮುದಾಯದ ತರಬೇತಿ ಕೇಂದ್ರ
4) ಕೃಷಿ ಭೂಮಿ ಮಣ್ಣು ಪರೀಕ್ಷಣಾ ಕೇಂದ್ರ
5) ಶುದ್ಧ ಬೀಜ ಹಾಗೂ ಗೊಬ್ಬರ ಕೇಂದ್ರ
6) ಕೃಷಿ ಸಂಬಂಧಿಸಿದ ಸಲಕರಣೆಗಳ ಸಂಗ್ರಹಣಾ ಕೊಠಡಿ
ಈ ಎಲ್ಲ ಅಂಶಗಳು ರೈತರ ಅಭಿವೃದ್ಧಿಗಾಗಿದ್ದು, ಇವುಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಕಾರಣಕ್ಕೂ ಸದರಿ ಜಮೀನು ಉಪಯೋಗಿಸಬಾರದೆಂದು ನಿರ್ದೇಶಿಸಿರುತ್ತಾರೆ ಮತ್ತು ಈ ಕಾರ್ಯಕ್ರಮಗಳ ಅನುಷ್ಮಾನದ ಸದುದ್ದೇಶಕ್ಕಾಗಿ ದೀರ್ಘಾವಧಿ ಕಾಲಕ್ಕಾಗಿ ಸರ್ಕಾರ ಮಂಜೂರು ಮಾಡಿರುತ್ತದೆ. ಆದರೆ ಲೀಜ್‌ದಾರರು ಯಾವುದೇ ರೈತರ ಉಪಯೋಗಕ್ಕೆ ಯಾವುದೇ ಕಾರ್ಯ ಚಟುನಟಿಕೆಗಳನ್ನು ಮಾಡದೇ ತಾವೇ ಸ್ವತಃ ಒಳ ಬಾಡಿಗೆದಾರರಿಗೆ ನೀಡಿರುತ್ತೀರಿ ಎಂದು ದೂರಿದ್ದಾರೆ.
| # | ಉಪ ಭಾಡಿಗೆದಾರರ ಹೆಸರು | ಬಾಡಿಗೆ ನೀಡಿದ ಕ್ಷೇತ್ರ |
|---|---|---|
| 1 | ಹೋಟೆಲ್, ಅಮೋಲೋ ಬಾರ್ & ರೇಸ್ಕೋರಂಟ್ | 1924 ಚ.ಅ |
| 2 | ಲೂನಾ ಟೀ ಬಾರ್ | 390 ಚ.ಅ |
| 3 | ಸನತ ಕುಮಾರ | 1924 ಚ.ಅ |
| 4 | ಶ್ರೀರಾಮ್ ಮೆಡಿಕಲ್ಸ್ | 390 ಚ.ಅ |
| 5 | ಸಂಗಮ್ ಸ್ವೀಟ್ ಮಾರ್ಟ್ | 780 ಚ.ಅ |
| 6 | ಹಣಮಣ್ಣವರ್ ಟ್ರೇಡರ್ | 780 ಚ.ಅ |
| 7 | ಹೋಟೆಲ್ ಸ್ವೀಕಾರ್ | 780 ಚ.ಅ |
| 8 | M I ಮುಲ್ಲಾ | 100 ಚ.ಅ |
| 9 | ಸೆಂಟ್ರಲ್ ಕೆಫೆ | 100 ಚ.ಅ |
| 10 | ಅಪೋಲೋ ಲಾಡ್ಜ್ | ಮೊದಲನೆ ಮಹಡಿ |
ಒಡಂಬಡಿಕೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ವಾಣಿಜ್ಯ ಚಟುವಟಿಕೆಗಳನ್ನು ಮಾಡಲು ಬೇರೆ ಬೇರೆ ಜನರಿಗೆ ನಿಯಮದಾಹೀರ ಒಳಬಾಡಿಗೆ ಕೊಟ್ಟು ಬಾಡಿಗೆ ಪಡೆಯುತ್ತಿದ್ದರೆ, ಅದೇ ರೀತಿ ಸರ್ಕಾರದ ಅಧೀನ ಕಾರ್ಯದರ್ಶಿಗಳು ಲೋಕೋಪಯೋಗಿ ಇಲಾಖೆ ಕರ್ನಾಟಕ ಸರ್ಕಾರದ ಸಚಿವಾಲಯ ವಿಕಾಸ ಸೌಧ, ಬೆಂಗಳೂರು ಇವರು ಲೀಜದಾರರು ಲೀಜ್ ಕಾರುಗಳ ಶರತ್ತುಗಳನ್ನು At Karnataka Public Premises (Eviction of Unauthorissed Occupats) Act 1974 ಮೇರೆಗೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಕಟ್ಟಡದ ಲೀಜ್‌ದಾರರ ಲೀಜ್ ಆದೇಶವನ್ನು ರದ್ದು ಪಡಿಸಲು ಅನುಮತಿ ನೀಡಿರುತ್ತಾರೆ.
ಲೋಕೋಪಯೋಗಿ ಇಲಾಖೆಯಿಂದ ರೈತರಿಗೆ ನೀಡಿದ ಕೃಷಿ ಭವನ ಈಗ ವಾಣಿಜ ಚಟುವಟಿಕೆಗೆ ಬಳಸಿಕೊಂಡಿದ್ದಾರೆ. ಸರ್ಕಾರ ತೆರವುಗೊಳಿಸೋಕ್ಕೆ ಆದೇಶ ಮಾಡಿ 10 ತಿಂಗಳು ಕಳೆದರೂ ಸರ್ಕಾರದ ಆಸ್ತಿ ಉಳಿಸಿಕೊಳ್ಳಲು ಯಾವುದೇ ರೀತಿ ಕ್ರಮ ಕೈಗೊಳ್ಳದೆ ಲೋಕೋಪಯೋಗಿ ಇಲಾಖೆಯವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಮಹಿಳೆಯರ ಬೇಡಿಕೆಗಳು :-
ಮಹಿಳೆಯರ ಮೇಲೆ ಹಾಗೂ ಮಕ್ಕಳ ಮೇಲೆ ಅತ್ಯಾಚಾರ ದೌರ್ಜನ್ಯಗಳು ನಡೆಯುತ್ತಿವೆ ಇದನ್ನು ತಡೆಗಟ್ಟಲು ಸೂಕ್ತ ಕಠಿಣ್ ಕಾನೂನು ಕ್ರಮವನ್ನು ಜಾರಿಗೆ ತರಬೇಕು. - ಮಹಿಳಾ ಸ್ವಸಹಾಯ ಸಂಘ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನ ವನ್ನು ಮಾಡಬೇಕು.










